ಮತದಾರ ಪಟ್ಟಿ ಪರಿಷ್ಕರಣೆಯಲ್ಲಿ ಭಾಗಿಯಾಗಿ

ಎಸ್​ಐಆರ್​ ಜಾಗೃತಿ ಅಂಗವಾಗಿ ಕೊಪ್ಪಳದಲ್ಲಿ ಮಂಗಳವಾರ ಜಾಗೃತಿ ನಡಿಗೆ ಹಮ್ಮಿಕೊಳ್ಳಲಾಯಿತು. ಡಿಸಿ ಡಾ.ಸುರೇಶ ಬಿ.ಇಟ್ನಾಳ, ಜಿಪಂ ಸಿಇಒ ವರ್ಣಿತ್​ ನೇಗಿ, ಸಹಾಯಕ ಆಯುಕ್ತ ಮಹೆಬೂಬ್​ ಜೀಲಾನ್​, ಜಿಪಂ ಉಪ ಕಾರ್ಯದರ್ಶಿ ಟುಇ.ಕೃಷ್ಣಮೂರ್ತಿ ಇದ್ದರು.
ಎಸ್​ಐಆರ್​ ಜಾಗೃತಿ ಅಂಗವಾಗಿ ಕೊಪ್ಪಳದಲ್ಲಿ ಮಂಗಳವಾರ ಜಾಗೃತಿ ನಡಿಗೆ ಹಮ್ಮಿಕೊಳ್ಳಲಾಯಿತು. ಡಿಸಿ ಡಾ.ಸುರೇಶ ಬಿ.ಇಟ್ನಾಳ, ಜಿಪಂ ಸಿಇಒ ವರ್ಣಿತ್​ ನೇಗಿ, ಸಹಾಯಕ ಆಯುಕ್ತ ಮಹೆಬೂಬ್​ ಜೀಲಾನ್​, ಜಿಪಂ ಉಪ ಕಾರ್ಯದರ್ಶಿ ಟುಇ.ಕೃಷ್ಣಮೂರ್ತಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿಸಿ ಡಾ.ಸುರೇಶ ಬಿ.ಇಟ್ನಾಳ ಕರೆ
  • ಮೊದಲ ದಿನ 31,326 ಪತ್ರ ಹಂಚಿಕೆ
ಕೊಪ್ಪಳ : ಮತದಾರ ಪಟ್ಟಿ ವಿಶೇಷ ಪರಿಷ್ಕರಣೆಯಲ್ಲಿ ಭಾಗಿಯಾಗಿ ಗಣತಿ ಪತ್ರ ಭರ್ತಿ ಮಾಡುವಂತೆ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಸಾರ್ವಜನಿಕರಿಗೆ ಮನವಿ ಮಾಡಿದರು.
ಜಿಲ್ಲಾ ಸ್ವೀಪ್​ ಸಮಿತಿಯಿಂದ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಾಗೃತಿ ನಡಿಗೆಯಲ್ಲಿ ಭಾಗಿಯಾಗಿ ಮಾತನಾಡಿದರು.
ಜೂನ್​ 30ರಿಂದ ಜುಲೈ 29ವರೆಗೆ ಪರಿಷ್ಕರಣೆ ನಡೆಯಲಿದೆ. ಬೂತ್​ ಮಟ್ಟದ ಅಧಿಕಾರಿ ಮನೆ ಮನೆಗೆ ಭೇಟಿ ನೀಡಿ ಅರ್ಜಿ ನೀಡುವರು. ಅರ್ಜಿ ಭರ್ತಿ ಮಾಡಿ ಸಲ್ಲಿಸಬೇಕು. ಮತದಾರ ಪಟ್ಟಿ ಹೆಸರು ಪರಿಶೀಲನೆ, ತಿದ್ದುಪಡಿ, ಹೊಸ ಮತದಾರರ ಸೇರ್ಪಡೆ, ಮೃತಪಟ್ಟವರು, ಸ್ಥಳಾಂತರಗೊಂಡವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆಯೂ ನಡೆಯಲಿದೆ. ಎಲ್ಲರೂ ಇ ಅವಕಾಶ ಸದ್ಬಳಕೆ ಮಾಡಿಕೊಳ್ಳಿ. ನೋಂದಣಿ ಅರ್ಜಿಗೆ ಕುಟುಂಬದ ಯಾರಾದರೂ ಒಬ್ಬರು ಸಹಿ ಮಾಡಬಹುದು. ಬಿಎಲ್​ಒ ಮತ್ತು ಬಿಎಲ್​ಎಗಳು ಸಮನ್ವಯದಿಂದ ಕೆಲಸ ಮಾಡಿದಲ್ಲಿ ಅರ್ಹರು ಪಟ್ಟಿಯಿಂದ ಹೊರಗುಳಿಯುವುದಿಲ್ಲವೆಂದರು.
ಜಿಪಂ ಸಿಇಒ ವರ್ಣಿತ್​ ನೇಗಿ ಮಾತನಾಡಿ, ಸಾರ್ವಜನಿಕರು ಅಗತ್ಯ ಮಾಹಿತಿ ಒದಗಿಸಿ. ಒಬ್ಬ ಮತದಾರರ ಒಂದಕ್ಕಿಂತ ಹೆಚ್ಚು ಕಡೆ ಮತದಾನ ಹಕ್ಕು ಪಡೆಯುವಂತಿಲ್ಲ. ಅನರ್ಹರನ್ನು ತೆಗೆಯಲು ಹಾಗೂ ಅರ್ಹರನ್ನು ಉಳಿಸಲು ಸಹಕರಿಸಿ. ನಗರ ಹಾಗೂ ಗ್ರಾಮೀಣ ಪ್ರದೇಶಗಳ ಮತದಾರರಿಗೆ ಮಾಹಿತಿ ನೀಡಲು ನೆವು ಕೇಂದ್ರಗಳನ್ನು ತೆರೆಯಲಾಗಿದ್ದು ಸಹಾಯ ಪಡೆಯುವಂತೆ ತಿಳಿಸಿದರು.
ನಗರದ ಪ್ರವಾಸಿ ಮಂದಿರದಿಂದ ಅಶೋಕ ವೃತ್ತ, ಬಸವೇಶ್ವರ ವೃತ್ತವರೆಗೆ ವಾಕ್​ಥಾನ್​ ನಡೆಯಿತು. ಸಹಾಯಕ ಆಯುಕ್ತ ಮಹೆಬೂಬ್​ ಜೀಲಾನ್​, ಜಿಪಂ ಉಪ ಕಾರ್ಯದರ್ಶಿ ಟುಇ.ಕೃಷ್ಣಮೂರ್ತಿ, ಯೋಜನ ನಿರ್ದೇಶಕ ಎಸ್​.ಎಂ. ಕಾಂಬಳೆ, ಡಿಯುಡಿಸಿ ಪಿಡಿ ಮಂಜುನಾಥ ಗುಂಡೂರು ಇತರರಿದ್ದರು.
"

ಜಿಲ್ಲೆಯಲ್ಲಿ 1315 ಬೂತ್​ ಅಧಿಕಾರಿಗಳನ್ನು ಅರ್ಜಿ ವಿತರಣೆಗೆ ನೇಮಿಸಲಾಗಿದೆ. ಐದು ವಿಧಾನಸಭಾ ಕ್ಷೇತ್ರಗಳಲ್ಲಿ 11,90,214 ಮತದಾರರಿದ್ದು, ಮಂಗಳವಾರ ಸಂಜೆ 6ಗಂಟೆವರೆಗೆ 31,326 ಗಣತಿ ನಮೂನೆ ಹಂಚಿಕೆ ಮಾಡಲಾಗಿದೆ. ಜನರು ಅರ್ಜಿ ಪಡೆದು ಅಗತ್ಯ ಮಾಹಿತಿ ಒದಗಿಸಿ ಸಹಕರಿಸಬೇಕು.

— ಡಾ.ಸುರೇಶ ಬಿ.ಇಟ್ನಾಳ. ಕೊಪ್ಪಳ ಡಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net