ಶರಣ ಸಂಪ್ರದಾಯದಲ್ಲಿ ಮೊದಲಿಗರು

ಕನಕಗಿರಿ ತಹಸಿಲ್ ಕಚೇರಿಯಲ್ಲಿ  ದೇವರ ದಾಸಿಮಯ್ಯನವರ ಜಯಂತಿ ಆಚರಿಸಲಾಯಿತು. ಶಿರಸ್ತೇದಾರ್ ಸುನೀಲ್‌ಕುಮಾರ, ಸಿಬ್ಬಂದಿ ಗುರುಲಿಂಗಯ್ಯ, ವಿಜಯ, ರವೀಶ ಹಿರೇಮಠ, ಶರಣಪ್ಪ ಚಳಗೇರಿ ಇತರರಿದ್ದರು.
ಕನಕಗಿರಿ ತಹಸಿಲ್ ಕಚೇರಿಯಲ್ಲಿ ದೇವರ ದಾಸಿಮಯ್ಯನವರ ಜಯಂತಿ ಆಚರಿಸಲಾಯಿತು. ಶಿರಸ್ತೇದಾರ್ ಸುನೀಲ್‌ಕುಮಾರ, ಸಿಬ್ಬಂದಿ ಗುರುಲಿಂಗಯ್ಯ, ವಿಜಯ, ರವೀಶ ಹಿರೇಮಠ, ಶರಣಪ್ಪ ಚಳಗೇರಿ ಇತರರಿದ್ದರು.
Published on
ಕನಕಗಿರಿ: ದೇವರ ದಾಸಿಮಯ್ಯ, ಬಸವಣ್ಣನಿಗಿಂತ ಪೂರ್ವದಲ್ಲೇ ವಚನಗಳನ್ನು ಬರೆದು ವಚನ ಸಾಹಿತ್ಯಕ್ಕೆ ಭದ್ರ ಬುನಾದಿ ಹಾಕಿದರು ಎಂದು ಶಿರಸ್ತೇದಾರ್ ಅನಿತಾ ಇಂಡಿ ಹೇಳಿದರು. ಇಲ್ಲಿನ ತಹಸಿಲ್ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ದೇವರ ದಾಸಿಮಯ್ಯ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ಕನ್ನಡ ನಾಡಿನ ಶಿವ ಶರಣರಲ್ಲಿ ದೇವರ ದಾಸಿಮಯ್ಯ ಅವರು 11ನೇ ಶತಮಾನದಲ್ಲಿ ಆಗಿ ಹೋದ ಶರಣರು. ಶರಣ ಸಂಪ್ರದಾಯದಲ್ಲಿ ಮೊದಲಿಗರು ಹಾಗೂ ಆದ್ಯ ವಚನಕಾರ ಪಿತಾಮಹ. ಜನಪದ ಜಗದ್ಗುರು ಎಂಬ ಬಿರುದು ಸಹ ಇವರಿಗೆ ಇದೆ. ದಾಸಿಮಯ್ಯನವರ ವೃತ್ತಿ ನೇಯ್ಗೆಯಾಗಿದ್ದು, ಕಾಯಕದ ಜತೆಗೆ ಅನೇಕ ಪವಾಡಗಳನ್ನು ಮಾಡಿದ್ದಾರೆ.ಇವರ ವಚನಗಳಲ್ಲಿ ಸಾಮಾಜಿಕ ಪರಿವರ್ತನೆ, ಭಕ್ತಿ ಮತ್ತು ವೈಚಾರಿಕತೆ ಎದ್ದು ಕಾಣುತ್ತದೆ ಎಂದರು.
ಸಿಬ್ಬಂದಿ ಅಮರೇಶ ಬಾವಿಕಟ್ಟಿ, ಅಮರೇಶ, ರಮೇಶ, ವಸಂತ, ಸಂಗಮೇಶ, ಶಿವುಕುಮಾರ ಮ್ಯಾಗೇರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net