ದಲಿತ ಮುಖಂಡ ಹಂತಕರಿಗೆ ಕಠಿಣ ಶಿಕ್ಷೆ ವಿಧಿಸಿ

ಕನಕಗಿರಿಯಲ್ಲಿ ತಹಸೀಲ್ದಾರ್ ಚಂದ್ರಶೇಖರ ಗಾಳಿಗೆ ಮಾದಿಗ ಮಹಾಸಭಾ ತಾಲೂಕು ಘಟಕ ಗುರುವಾರ ಮನವಿ ಸಲ್ಲಿಸಿತು. ಪಪಂ ಸದಸ್ಯ ಹನುಮಂತ ಬಸರಿಗಿಡ, ಪ್ರಮುಖರಾದ ಕನಕಪ್ಪ ಮ್ಯಾಗಡೆ, ಹುಲಗಪ್ಪ ಪೂಜಾರ, ಮಂಜುನಾಥ ಮ್ಯಾಗಡೆ ಇತರರಿದ್ದರು.
ಕನಕಗಿರಿಯಲ್ಲಿ ತಹಸೀಲ್ದಾರ್ ಚಂದ್ರಶೇಖರ ಗಾಳಿಗೆ ಮಾದಿಗ ಮಹಾಸಭಾ ತಾಲೂಕು ಘಟಕ ಗುರುವಾರ ಮನವಿ ಸಲ್ಲಿಸಿತು. ಪಪಂ ಸದಸ್ಯ ಹನುಮಂತ ಬಸರಿಗಿಡ, ಪ್ರಮುಖರಾದ ಕನಕಪ್ಪ ಮ್ಯಾಗಡೆ, ಹುಲಗಪ್ಪ ಪೂಜಾರ, ಮಂಜುನಾಥ ಮ್ಯಾಗಡೆ ಇತರರಿದ್ದರು.
Published on

ಕನಕಗಿರಿ: ರಾಯಚೂರು ಜಿಲ್ಲೆ ದೇವದುರ್ಗದಲ್ಲಿ ದಲಿತ ಮುಖಂಡ ಭೂಮಾನಂದ ಹತ್ಯೆ ಖಂಡಿಸಿ ಮಾದಿಗ ಮಹಾಸಭಾ ತಾಲೂಕು ಘಟಕದಿಂದ ಗುರುವಾರ ತಹಸೀಲ್ದಾರ್ ಚಂದ್ರಶೇಖರ ಗಾಳಿಗೆ ಮನವಿ ಸಲ್ಲಿಸಲಾಯಿತು.

ತಾಲೂಕು ಸಂಚಾಲಕ ನಿಂಗಪ್ಪ ಪೂಜಾರಿ ಮಾತನಾಡಿ, ಸಂವಿಧಾನವು ಪ್ರತಿಯೊಬ್ಬರಿಗೂ ಜೀವಿಸುವ, ಸಮಾನತೆಯ ಹಕ್ಕು ನೀಡಿದೆ. ಆದರೆ, ರಾಜ್ಯದಲ್ಲಿ ದಲಿತ ಮುಖಂಡರು, ಸಾಮಾಜಿಕ ಹೋರಾಟಗಾರರು ಹಾಗೂ ಶೋಷಿತ ಸಮುದಾಯಗಳ ಧ್ವನಿಯಾಗಿರುವವರ ಮೇಲೆ ದಾಳಿ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. 
ಸರ್ಕಾರಗಳು ದಲಿತ ಹಾಗೂ ಶೋಷಿತರ ಪರವಾಗಿ ಕೆಲಸ ಮಾಡುತ್ತಿರುವುದಾಗಿ ಹೇಳುತ್ತಿವೆ. ಆದರೆ, ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಅವರು, ಭೂಮಾನಂದ ಕೊಲೆ ಕುರಿತು ಉನ್ನತ ತನಿಖೆ ನಡೆಸಿ, ತಪ್ಪಿತಸ್ಥರು ಹಾಗೂ ಹಿಂದಿನ ಸಂಚುಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಭೂಮಾನಂದ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ, 10 ಎಕರೆ ಜಮೀನು, ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಆಗ್ರಹಿಸಿದರು.
ಗ್ಯಾರಂಟಿ ಸಮಿತಿ ಸದಸ್ಯ ನೀಲಕಂಠ ಬಡಿಗೇರ ಮಾತನಾಡಿ, ರಾಜ್ಯದಲ್ಲಿ ದಲಿತ ಮುಖಂಡರು, ಸಾಮಾಜಿಕ ಕಾರ್ಯಕರ್ತರಿಗೆ ರಕ್ಷಣೆ ನೀಡಲು ಪೊಲೀಸ್ ಇಲಾಖೆ ಮುಂದಾಗಬೇಕು. ಭೂಮಾನಂದ ಕೊಲೆ ಪ್ರಕರಣವನ್ನು ತ್ವರಿತ ನ್ಯಾಯಾಲಯದ ಮೂಲಕ ಇತ್ಯರ್ಥಪಡಿಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು. 
ಪಪಂ ಸದಸ್ಯ ಹನುಮಂತ ಬಸರಿಗಿಡ, ಡಿಎಸ್‌ಎಸ್(ಅಂಬೇಡ್ಕರ್ ವಾದ) ತಾಲೂಕು ಸಂಚಾಲಕ ಕನಕಪ್ಪ ಮ್ಯಾಗಡೆ, ಪ್ರಮುಖರಾದ ಹುಲಗಪ್ಪ ಪೂಜಾರ, ಮಂಜುನಾಥ ಮ್ಯಾಗಡೆ, ಹನುಮೇಶ ಭಜಂತ್ರಿ, ಹನುಮೇಶ ಜವಳಗೇರಾ, ಹನುಮೇಶ ಮ್ಯಾಗಡೆ, ವೀರೇಶ ಸೂಳೇಕಲ್, ಶರಣಪ್ಪ ಸೂಳೇಕಲ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net