ಸಂಸ್ಕೃತಿ ಉಳಿಸಲು ವಿದ್ಯಾರ್ಥಿಗಳು ಮುಂದಾಗಲಿ

ಕುಷ್ಟಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರಾಚಾರ್ಯೆ ವಿದ್ಯಾ ಗೋಟೂರು ಚಾಲನೆ ನೀಡಿದರು. ಸಾಂಸ್ಕೃತಿಕ ಮತ್ತು ಕ್ರೀಡಾ ವಿಭಾಗದ ಮುಖ್ಯಸ್ಥೆ ಅನಿತಾ, ಉಪನ್ಯಾಸಕರಾದ ವಿಶ್ವನಾಥ ಕೋಳೂರು, ಶಿವರಾಜ್ ಇದ್ದರು.

Published on
ಕುಷ್ಟಗಿ: ಪ್ರತಿಯೊಬ್ಬ ವಿದ್ಯಾರ್ಥಿಗಳು ಸಂಸ್ಕೃತಿ, ಪರಂಪರೆ ಉಳಿವಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪ್ರಾಚಾರ್ಯೆ ವಿದ್ಯಾ ಗೋಟೂರು ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಾಡಿನ ಸಾಂಸ್ಕೃತಿಕ ಬೆಳೆವಣಿಗೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಬಹು ಮುಖ್ಯವಾಗಿದ್ದು, ಪೂರ್ವಿಕರ ಕಾಲದಿಂದಲೂ ಬಂದಿರುವ ಆಚರಣೆಗಳನ್ನು ಜೀವಂತವಾಗಿ ಉಳಿಸುವ ಮನೋಭಾವನೆ ಬೆಳೆಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ ಎಂದರು.
ಅತಿಥಿ ಉಪನ್ಯಾಸಕ ಶಿವರಾಜ್ ಕೋಳೂರು, ಜಾನಪದ ಗೀತೆಗಳನ್ನು ಹಾಡಿದರು. ಸಾಂಸ್ಕೃತಿಕ ಮತ್ತು ಕ್ರೀಡಾ ವಿಭಾಗದ ಮುಖ್ಯಸ್ಥೆ ಅನಿತಾ, ಉಪನ್ಯಾಸಕರಾದ ವಿಶ್ವನಾಥ ಕೋಳೂರು, ಶಶಿಕಲಾ, ದುರಗೇಶ್, ಭೋವಿರಾಜ್, ಪ್ರಕಾಶ, ಸುರೇಶ್, ಸಂಗೀತಾ, ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net