ಸಂಸ್ಕೃತ ಭಾಷೆ ಕಲಿಕೆ ಜತೆಗೆ ಸಂಸ್ಕೃತಿ ಅರಿವು ಅವಶ್ಯ

ಗಂಗಾವತಿ ಶ್ರೀ ಸತ್ಯನಾರಾಯಣ ದೇವಾಲಯದ 36ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಬೆಂಗಳೂರಿನ ಮಲ್ಲೇಶ್ವರಂ ತುಳಸಿತೋಟ ಪ್ರಸನ್ನ ಕೃಷ್ಣಸ್ವಾಮಿ ದೇವಾಲಯದಿಂದ ಶ್ರೀನಿವಾಸ ಕಲ್ಯಾಣೋತ್ಸವ ಮಂಗಳವಾರ ನೆರವೇರಿಸಲಾಯಿತು. ಪ್ರಮುಖರಾದ ವೇಣುಗೋಪಾಲ ಭಟ್, ಶೇಷಾದ್ರಿ ಭಟ್ ಮತ್ತು ವಿಷ್ಣುಭಟ್ ಇತರರಿದ್ದರು.
ಗಂಗಾವತಿ ಶ್ರೀ ಸತ್ಯನಾರಾಯಣ ದೇವಾಲಯದ 36ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಬೆಂಗಳೂರಿನ ಮಲ್ಲೇಶ್ವರಂ ತುಳಸಿತೋಟ ಪ್ರಸನ್ನ ಕೃಷ್ಣಸ್ವಾಮಿ ದೇವಾಲಯದಿಂದ ಶ್ರೀನಿವಾಸ ಕಲ್ಯಾಣೋತ್ಸವ ಮಂಗಳವಾರ ನೆರವೇರಿಸಲಾಯಿತು. ಪ್ರಮುಖರಾದ ವೇಣುಗೋಪಾಲ ಭಟ್, ಶೇಷಾದ್ರಿ ಭಟ್ ಮತ್ತು ವಿಷ್ಣುಭಟ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅನಿಸಿಕೆ
  • ಶ್ರೀ ಸತ್ಯನಾರಾಯಣ ದೇವಾಲಯ ವಾರ್ಷಿಕೋತ್ಸವ
ಗಂಗಾವತಿ: ಮಕ್ಕಳಲ್ಲಿ ಧಾರ್ಮಿಕ ಮತ್ತು ಅಧ್ಯಾತ್ಮ ಮನೋಭಾವ ಬೆಳೆಸುವ ಜವಾಬ್ದಾರಿ ಪಾಲಕರ ಮೇಲಿದ್ದು, ಸಂಸ್ಕಾರ ನೀಡುವಂತೆ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ನಗರದ ಸತ್ಯನಾರಾಯಣ ಪೇಟೆಯ ಶ್ರೀ ಸತ್ಯ ನಾರಾಯಣ ದೇವಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದೇವಾಲಯದ 36ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಸಂಸ್ಕೃತ ಕಲಿಕೆ ಜತೆಗೆ ಸಂಸ್ಕೃತಿ ಬಗ್ಗೆ ತಿಳಿವಳಿಕೆ ಮೂಡಿಸಬೇಕಿದ್ದು, ಮಠಮಾನ್ಯಗಳಲ್ಲಿರುವ ಸಂಸ್ಕಾರ ಶಿಬಿರಕ್ಕೆ ಮಕ್ಕಳನ್ನು ಬಿಡಬೇಕಿದೆ. ಸಂಸ್ಕೃತ ಅಧ್ಯಯನಕ್ಕಾಗಿ ವಿವಿಗಳಲ್ಲಿ ಪ್ರವೇಶ ಪಡೆಯಬೇಕಿದ್ದು, ಧಾರ್ಮಿಕ ಮತ್ತು ಸಂಪ್ರದಾಯ ಬದ್ಧ ಪೂಜೆ ಕೈಗೊಳ್ಳಲು ತರಬೇತಿಯ ಅಗತ್ಯವಿದೆ. ಕುಟುಂಬ ಸದಸ್ಯರೊಂದಿಗೆ ಸಂಸ್ಕೃತದಲ್ಲಿ ಮಾತನಾಡುವುದನ್ನು ರೂಢಿಸಿಕೊಳ್ಳಬೇಕಿದ್ದು, ಅನ್ಯರೊಂದಿಗೆ ಸಂಸ್ಕಾರದಿಂದ ವರ್ತಿಸುವಂತೆ ಸಲಹೆ ನೀಡಿದರು.
ದೇವಾಲಯದಲ್ಲಿನ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಿದ ನಂತರ, ಸಂಸ್ಥಾನ ಪೂಜೆ ಕೈಗೊಂಡರು. ಭಕ್ತರಿಗೆ ಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಮಾಜಿ ಶಾಸಕ ಪರಣ್ಣ ಮುನವಳ್ಳಿ, ಉದ್ಯಮಿ ಸರ್ವೇಶ ಮಾಂತಗೊಂಡ, ಪ್ರಮುಖರಾದ ಸಿ.ಎಚ್.ಲಕ್ಷ್ಮೀನಾರಾಯಣ ಶ್ರೇಷ್ಠಿ, ವಾದಿರಾಜಾಚಾರ್ ಕಲ್ಮಂಗಿ ಇತರರಿದ್ದರು.
ಕಲ್ಯಾಣೋತ್ಸವ
ಸಂಜೆ ದೇವಾಲಯ ಮುಂಭಾಗ ದಲ್ಲಿ ಬೆಂಗಳೂರಿನ ಮಲ್ಲೇಶ್ವರಂ ತುಳಸಿತೋಟ ಪ್ರಸನ್ನ ಕೃಷ್ಣಸ್ವಾಮಿ ದೇವಾಲಯದಿಂದ ಶ್ರೀನಿವಾಸ ಕಲ್ಯಾಣೋತ್ಸವ ಅದ್ದೂರಿಯಾಗಿ ನೆರವೇರಿಸಲಾ ಯಿತು. ದೇವಾಲಯ ಸಮಿತಿ ಪ್ರಮುಖರಾದ ವೇಣುಗೋಪಾಲ ಭಟ್, ಶೇಷಾದ್ರಿ ಭಟ್ ಮತ್ತು ವಿಷ್ಣುಭಟ್ ನೇತೃತ್ವದ ತಂಡದಿಂದ ಸಂಪ್ರದಾಯ ಬದ್ಧವಾಗಿ ಕಲ್ಯಾಣೋತ್ಸವ ನೆರವೇರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net