ಇಲಾಖಾವಾರು ಕಾನೂನು ಅರಿವು ಮೂಡಿಸಿ

ಕೊಪ್ಪಳದಲ್ಲಿ ಮಂಗಳವಾರ ಕಾನೂನು ಅರಿವು ಮೂಡಿಸುವ ಸಂಬಂಧ ನ್ಯಾಯಾಧೀಶ ಮಲ್ಕಾರಿ ರಾಮಪ್ಪ ಒಡೆಯರ್​ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು.  ನ್ಯಾಯಾಧೀಶ ಮಹಾಂತೇಶ ದರಗದ, ಎಸಿ ಮಹಿಬೂಬ್​ ಜೀಲಾನಿ, ಜಿಪಂ ಉಪಕಾರ್ಯದರ್ಶಿಗಳಾದ ಟಿ.ಕೃಷ್ಣಮೂರ್ತಿ, ಎಎಸ್ಪಿ ಹೇಮಂತ್​ ಕುಮಾರ್​, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧು ಅಂಗಡಿ ಇದ್ದರು.
ಕೊಪ್ಪಳದಲ್ಲಿ ಮಂಗಳವಾರ ಕಾನೂನು ಅರಿವು ಮೂಡಿಸುವ ಸಂಬಂಧ ನ್ಯಾಯಾಧೀಶ ಮಲ್ಕಾರಿ ರಾಮಪ್ಪ ಒಡೆಯರ್​ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು. ನ್ಯಾಯಾಧೀಶ ಮಹಾಂತೇಶ ದರಗದ, ಎಸಿ ಮಹಿಬೂಬ್​ ಜೀಲಾನಿ, ಜಿಪಂ ಉಪಕಾರ್ಯದರ್ಶಿಗಳಾದ ಟಿ.ಕೃಷ್ಣಮೂರ್ತಿ, ಎಎಸ್ಪಿ ಹೇಮಂತ್​ ಕುಮಾರ್​, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧು ಅಂಗಡಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನ್ಯಾಯಾಧೀಶ ವೇದಮೂರ್ತಿ ಬಿ.ಎಸ್​. ಸಲಹೆ
ಕೊಪ್ಪಳ : ಎಲ್ಲ ಇಲಾಖೆ ಅಧಿಕಾರಿಗಳು ಕಾನೂನು ಸೇವಾ ಪ್ರಾಧಿಕಾರ ಸಹಯೋಗದಲ್ಲಿ ನಿಮ್ಮ ಇಲಾಖೆಗೆ ಸಂಬಂಧಿಸಿದ ಕಾನೂನು ಅರಿವು ಮೂಡಿಸಿ ಎಂದು ಗಂಗಾವತಿ1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೇದಮೂರ್ತಿ ಬಿ.ಎಸ್​. ಸೂಚಿಸಿದರು.
ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ದ್ವೆೃಮಾಸಿಕ ಸಭೆಯಲ್ಲಿ ವರ್ಚುವಲ್​ ಮೂಲಕ ಭಾಗಿಯಾಗಿ ಮಾತನಾಡಿದರು.
ಜು.11ರಂದು ರಾಷ್ಟ್ರೀಯ ಲೋಕ ಅದಾಲತ್​ ನಡೆಯಲಿದೆ. ಆಗಸ್ಟ್​ನಲ್ಲಿ ಸಮಾಧಾ ಸಮಾರೋಹ ಹೆಸರಿನ ವಿಶೇಷ ಲೋಕ ಅದಾಲತ್​ ಇರಲಿದೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ನಡೆವ ಕಾರ್ಯಕ್ರಮಗಳ ಯಶಸ್ಸಿಗೆ ಸರ್ಕಾರ, ಇಲಾಖೆಗಳ ಸಹಕಾರ ಅವಶ್ಯ. ಎಲ್ಲ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಿ. ಜು.30ರಂದು ನಡೆವ ಮಾನವ ಕಳ್ಳ ಸಾಗಣೆ ವಿರೋಧಿ ದಿನ ಯಶಸ್ಸುಗೊಳಿಸಿ. ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಕರೆ ತರಲು ಶಾಲೆಗೆ ಹಿಂತಿರುಗಿ ಅಭಿಯಾನ ನಡೆಸಿ. ಡ್ರಗ್ಸ್​ ನಿಮೂರ್ಲನಾ ಕಾಯ್ದೆ ಬಗ್ಗೆ ಶಾಲಾ&ಕಾಲೇಜುಗಳಲ್ಲಿ ಅರಿವು ಮೂಡಿಸಿ. ಪೋಕ್ಸೋ, ಜೆಜೆ ಕಾಯ್ದೆ ಜಾಗೃತಿ ಮೂಡಿಸುವಂತೆ ನಿರ್ದೇಶನ ನೀಡಿದರು.
ಸಿಜೆಎಂ ಹಾಗೂ ಹಿರಿಯ ಸಿವಿಲ್​ ನ್ಯಾಯಾಧೀಶ ಮಲ್ಕಾರಿ ರಾಮಪ್ಪ ಒಡೆಯರ್​ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಬೃಹತ್​ ಕಾನೂನು ಸೇವಾ ಶಿಬಿರ ಹಮ್ಮಿಕೊಳ್ಳಿ. ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ಕಾನೂನು ಸಾಕ್ಷರತಾ ಕಾರ್ಯಕ್ರಮಗಳನ್ನು ಆಯೋಜಿಸಿ. ಮಕ್ಕಳ ಕಲ್ಯಾಣ ಪೊಲೀಸ್​ ಅಧಿಕಾರಿಗಳು ಮತ್ತು ವಿಶೇಷ ಬಾಲಾಪರಾಧಿ ಪೊಲೀಸ್​ ಘಟಕಕ್ಕೆ ಸಂವೇದನಾಶೀಲತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಮಹಾಂತೇಶ ದರಗದ ಮಾತನಾಡಿ, ಸರ್ಕಾರಿ ಯೋಜನೆಗಳ ಬಗ್ಗೆ ಜನರಿಗೆ ನಿಖರ ಮಾಹಿತಿ ನೀಡಿ. ಅಸಂಘಟಿತ ವಲಯ ಕಾರ್ಮಿಕರಿಗೆ ಕಾನೂನು ಸೇವೆಗಳು, ಬಡತನ ನಿಮೂರ್ಲನಾ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಯೋಜನೆ ಸೇರಿ ಇತರ ಯೋಜನೆಗಳಿವೆ. ಅವುಗಳನ್ನು ಪರಿಣಾಮಕಾರಿಯಾಗಿ ಅನಿಷ್ಠಾನಗೊಳಿಸಿ ಎಂದು ಸೂಚಿಸಿದರು.
ಎಸಿ ಮಹಿಬೂಬ್​ ಜೀಲಾನಿ, ಜಿಪಂ ಉಪಕಾರ್ಯದರ್ಶಿಗಳಾದ ಟಿ.ಕೃಷ್ಣಮೂರ್ತಿ, ಎಎಸ್ಪಿ ಹೇಮಂತ್​ ಕುಮಾರ್​, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧು ಅಂಗಡಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net