ಕಲಿಕೆಗೆ ವಾತಾವರಣ ಕಲ್ಪಿಸಿ

ಇಟಗಿಯ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಆಯೋಜಿಸಿದ್ದ ಪಾಲಕರ, ಶಿಕ್ಷಕರ ಮಹಾಸಭೆಗೆ ಪ್ರಾಚಾರ್ಯ ರಾಮರಡ್ಡೆಪ್ಪ ಹಾಲಕೇರಿ ಚಾಲನೆ ನೀಡಿದರು. ಎಸ್ಡಿಎಂಸಿ ಅಧ್ಯಕ್ಷ ಕಳಕನಗೌಡ ಸಾದರ, ಪದಾಧಿಕಾರಿಗಳಾದ ಗವಿಸಿದ್ದಪ್ಪ ಗುಳಗಣ್ಣನವರ್, ಗೀತಾ ಸಜ್ಜನ್, ಶೈಲಜಾ ಹತ್ತಿಕಟಗಿ, ಶಿಕ್ಷಕರಾದ ಜಗದೀಶ ಅಜ್ಜಣ್ಣನವರ್, ರಂಗಪ್ಪ ಓಳೇಕರ್ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಚಾರ್ಯ ರಾಮರಡ್ಡೆಪ್ಪ ಹಾಲಕೇರಿ ಸಲಹೆ
  • ಕುಕನೂರು ಇಟಗಿ ಪಾಲಕರ, ಶಿಕ್ಷಕರ ಮಹಾಸಭೆ
ಕುಕನೂರು: ಪಾಲಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳ ಶೈಕ್ಷಣಿಕ ಆಶಯಗಳನ್ನು ಈಡೇರಿಸುವ ಕಾರ್ಯ ಮಾಡಲಿ ಎಂದು ಪ್ರಾಚಾರ್ಯ ರಾಮರಡ್ಡೆಪ್ಪ ಹಾಲಕೇರಿ ಹೇಳಿದರು.
ತಾಲೂಕಿನ ಇಟಗಿ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಜಿಲ್ಲಾಡಳಿತ, ಶಿಕ್ಷಣ ಇಲಾಖೆಯಿಂದ ಶನಿವಾರ ಆಯೋಜಿಸಿದ್ದ ಪಾಲಕರ, ಶಿಕ್ಷಕರ ಮಹಾಸಭೆಯಲ್ಲಿ ಮಾತನಾಡಿದರು.
ಪಾಲಕರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮನೆಯಲ್ಲಿ ಸೂಕ್ತ ವಾತಾವರಣ ಕಲ್ಪಿಸಬೇಕು. ಮಕ್ಕಳು ಶಾಲೆಗೆ ಹಾಜರಾಗಿದ್ದಾರೆಯೇ, ಇಲ್ಲವೇ ಎಂಬುದನ್ನು ಶಿಕ್ಷಕರನ್ನು ಸಂಪರ್ಕಿಸಿ ಖಚಿತ ಪಡಿಸಿಕೊಳ್ಳಬೇಕು. ಕಲಿಕಾಮಟ್ಟ ಪರಿಶೀಲಿಸಬೇಕು. ಮಕ್ಕಳಿಗೆ ಕ್ಲಿಷ್ಟಕರ ವಿಷಯಗಳ ಬಗ್ಗೆ ಶಿಕ್ಷಕರೊಂದಿಗೆ ಸಮಾಲೋಚಿಸಬೇಕು. ಇದರಿಂದ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಬಹುದು. ಸರ್ಕಾರದ ಆದೇಶದಂತೆ ಪ್ರತಿ ಎರಡು ತಿಂಗಳಿಗೊಮ್ಮೆ ಪಾಲಕರ ಹಾಗೂ ಶಿಕ್ಷಕರ ಮಹಾಸಭೆ ನಡೆಯಲಿದೆ. ಈಗಾಗಲೇ ಮುಂದಿನ ಪಾಲಕರ ಹಾಗೂ ಶಿಕ್ಷಕರ ಸಭೆಯ ದಿನಾಂಕವು ಕೂಡ ನಿಗದಿಯಾಗಿದೆ ಎಂದರು.
ಎಸ್ಡಿಎಂಸಿ ಅಧ್ಯಕ್ಷ ಕಳಕನಗೌಡ ಸಾದರ, ಪದಾಧಿಕಾರಿಗಳಾದ ಗವಿಸಿದ್ದಪ್ಪ ಗುಳಗಣ್ಣನವರ್, ಗೀತಾ ಸಜ್ಜನ್, ಶೈಲಜಾ ಹತ್ತಿಕಟಗಿ, ಶಿಕ್ಷಕರಾದ ಜಗದೀಶ ಅಜ್ಜಣ್ಣನವರ್, ರಂಗಪ್ಪ ಓಳೇಕರ್, ಜಯಪ್ಪ ಕನಕಮ್ಮನವರ್, ಬಸಮ್ಮ ಮೇಟಿ, ಶರಣಪ್ಪ ಬೊಮಳೇಕರ್, ಶ್ರೀಶೈಲಪ್ಪ, ರೋಹಿಣಿ, ಸಂತೋಷ್ ಕುಮಾರಿ, ಶ್ರೀದೇವಿ ಬೆಳದಡಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net