ಕುಕನೂರು ತಾಲೂಕಿನ ದ್ಯಾಂಪೂರ, ರಾಜೂರು ಸಮೀಪ ಹಮ್ಮಿಕೊಂಡಿದ್ದ ಕಡಲೆ ಮತ್ತು ಜೋಳದ ಬೆಳೆ ಕ್ಷೆತ್ರೋತ್ಸವವದಲ್ಲಿ ಕೃಷಿ ಅಧಿಕಾರಿ ಬಸವರಾಜ ತೇರಿನ್ ಬುಧವಾರ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ವಾಮನಮೂರ್ತಿ, ರೈತರಾದ ವೀರಯ್ಯ ಶಿರೂರಮಠ, ಹೊನ್ನಪ್ಪ ಮರಡಿ, ಹನುಮಂತ ತಳವಾರ ಇದ್ದರು.
ಕುಕನೂರು: ಉತ್ತಮ ಇಳುವರಿ ಬರಬೇಕಾದರೆ ರೈತರು ಬಿತ್ತನೆ ಮುನ್ನ ಬೀಜೋಪಚಾರ ಮಾಡುವುದು ಅವಶ್ಯ ಎಂದು ಕೃಷಿ ಅಧಿಕಾರಿ ಬಸವರಾಜ ತೇರಿನ್ ಹೇಳಿದರು.
ತಾಲೂಕಿನ ದ್ಯಾಂಪೂರ, ರಾಜೂರು ಸಮೀಪ ಕಡಲೆ ಮತ್ತು ಜೋಳದ ಬೆಳೆ ಕ್ಷೆತ್ರೋತ್ಸವವದಲ್ಲಿ ಬುಧವಾರ ಮಾತನಾಡಿದರು.ಹಿಂಗಾರು ಜೋಳ ಹಾಗೂ ಕಡಲೆ ಬಿತ್ತನೆ ಮಾಡುವ ಮೊದಲು ಬೀಜಗಳನ್ನು ಅಗತ್ಯ ಔಷಧಗಳಿಂದ ಬೀಜೋಪಚಾರ ಮಾಡಬೇಕು. ಅಂದಾಗ ಮಾತ್ರ ಉತ್ತಮ ಇಳುವರಿ ಬರಲು ಸಾಧ್ಯವಾಗುತ್ತದೆ. ಈ ಬಾರಿ ಕಡಲೆ ಬೆಳೆ ಉತ್ತಮವಾಗಿದ್ದು ಇಳುವರಿಯೂ ಹೆಚ್ಚಿದೆ. ಪ್ರತಿ ವರ್ಷ ಒಂದೇ ಬೆಳೆ ಬೆಳೆಯುವ ಬದಲು ಬೇರೆ ಬೆಳೆ ಬೆಳೆಯಬೇಕು ಎಂದರು.
ಸುಧಾರಿತ ಬೇಸಾಯ ಕ್ರಮಗಳ ಕುರಿತು ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ.ಎಂ.ವಿ. ರವಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ವಾಮನಮೂರ್ತಿ, ಜೋಳ ಮತ್ತು ಕಡಲೆ ಬೆಳೆಯಲ್ಲಿನ ಪೋಷಕಾಂಶಗಳು, ಕೀಟ, ರೋಗಗಳ ಕುರಿತು ಮಾಹಿತಿ ನೀಡಿದರು.
ಗ್ರಾಮದ ಪ್ರಗತಿಪರ ರೈತರಾದ ವೀರಯ್ಯ ಶಿರೂರಮಠ, ಹೊನ್ನಪ್ಪ ಮರಡಿ, ಹನುಮಂತ ತಳವಾರ, ಕೃಷಿ ಇಲಾಖೆಯ ಆತ್ಮ ಸಿಬ್ಬಂದಿ ಮತ್ತು ಸಜೀವಿನಿ ಸಿಬ್ಬಂದಿ ಜಿ.ಡಿ.ಕೊಳಜಿ, ಉಮಾ, ಶಾಂತಾ ಇತರರಿದ್ದರು.