ಕೈದಿಗಳ ಪ್ರಶ್ನೆಗೆ ಕುಂ.ವೀ. ಉತ್ತರ

ಕೊಪ್ಪಳ ಜಿಲ್ಲಾ ಕಾರಾಗೃಹದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶೇಷ ಸಂವಾದ ಕಾರ್ಯಕ್ರಮವನ್ನು ನ್ಯಾ. ಮಹಾಂತೇಶ್ ಎಸ್.ದರಗದ ಉದ್ಘಾಟಿಸಿದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ನಾಡೋಜ ಡಾ. ಕುಂಬಾರ ವೀರಭದ್ರಪ್ಪ, ಕಾರಾಗೃಹ ಅಧೀಕ್ಷಕ ಅಂಬರೀಷ್ ಎಸ್.ಪೂಜಾರಿ, ಸಹಾಯಕ ಜೈಲರ್ ಎಫ್.ಜಿ. ಬಾರಿಕೇರ್ ಇದ್ದರು.
ಕೊಪ್ಪಳ ಜಿಲ್ಲಾ ಕಾರಾಗೃಹದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶೇಷ ಸಂವಾದ ಕಾರ್ಯಕ್ರಮವನ್ನು ನ್ಯಾ. ಮಹಾಂತೇಶ್ ಎಸ್.ದರಗದ ಉದ್ಘಾಟಿಸಿದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ನಾಡೋಜ ಡಾ. ಕುಂಬಾರ ವೀರಭದ್ರಪ್ಪ, ಕಾರಾಗೃಹ ಅಧೀಕ್ಷಕ ಅಂಬರೀಷ್ ಎಸ್.ಪೂಜಾರಿ, ಸಹಾಯಕ ಜೈಲರ್ ಎಫ್.ಜಿ. ಬಾರಿಕೇರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಕಾರಾಗೃಹದಲ್ಲಿ ಸಂವಾದ
  • ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ್ ಎಸ್.ದರಗದ ಭಾಗಿ
ಕೊಪ್ಪಳ: ಜಿಲ್ಲಾ ಕಾರಾಗೃಹದಲ್ಲಿ 140ಕ್ಕೂ ಹೆಚ್ಚು ಕೈದಿಗಳಿದ್ದು, ಅವರ ಮನ ಪರಿವರ್ತನೆಗಾಗಿ ನಾಡಿನ ಖ್ಯಾತ ಬರಹಗಾರರು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ನಾಡೋಜ ಡಾ.ಕುಂ. ವೀರಭದ್ರಪ್ಪ ಅವರಿಂದ ಕಾರಾಗೃಹದಲ್ಲಿ ಶುಕ್ರವಾರ ವಿಶೇಷ ಸಂವಾದ ನಡೆಸಲಾಯಿತು.
ಈ ಸಂವಾದದಲ್ಲಿ ಮನುಷ್ಯನ ವರ್ತನೆ, ಪೋಸ್ಕೊ ಪ್ರಕರಣಕ್ಕೆ ಕಾರಣಗಳು, ಜಾತಿ ವ್ಯವಸ್ಥೆ, ಬಡತನ, ಹಸಿವು ಹೀಗೆ ವಿವಿಧ ಆಸಕ್ತಿದಾಯಕ ವಿಷಯಗಳ ಬಗ್ಗೆ ಕೈದಿಗಳು ಕುಂಬಾರ ವೀರಭದ್ರಪ್ಪ ಹತ್ತಿರ ಪ್ರಶ್ನೆ ಕೇಳಿ ಉತ್ತರ ಪಡೆದುಕೊಂಡರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾಂತೇಶ್ ಎಸ್.ದರಗದ ವಾತನಾಡಿ, ಕಾರಾಗೃಹದಲ್ಲಿನ ಕೈದಿಗಳು ಮುಕ್ತವಾಗಿ ವಾತನಾಡುವಂತಹ ವಾತಾವರಣ ಕಲ್ಪಿಸಲು ಕುಂ.ವೀರಭದ್ರಪ್ಪನವರಂತಹ ಸಾಹಿತಿಗಳನ್ನು ಕಾರಾಗೃಹಕ್ಕೆ ಕರೆಯಿಸಿ ಸಂವಾದ ನಡೆಸಿದ್ದು ವಿಶೇಷ ಎಂದರು.
ಕಾರಾಗೃಹ ಅಧೀಕ್ಷಕ ಅಂಬರೀಷ್ ಎಸ್.ಪೂಜಾರಿ ವಾತನಾಡಿ, ಬಂಧಿಗಳ ತಲೆ ಎಣಿಸಿ ಕರ್ತವ್ಯ ನಿರ್ವಹಿಸಿದರೆ ಕಾರಾಗೃಹದ ಕೈದಿಗಳು ಬದಲಾವಣೆ ಹೊಂದುವುದಿಲ್ಲ. ಹೀಗಾಗಿ ಅವರ ಮನಪರಿವರ್ತನೆಗಾಗಿ ಈ ಸಂವಾದ ಆಯೋಜಿಸಲಾಗಿದೆ. ಡಾ.ಕುಂ.ವೀ. ಅವರಂತಹ ಬರಹಗಾರರ ವಾತಿನಿಂದ ಬದಲಾವಣೆ ಹೊಂದಿ ಮರು ಸಾವಾಜೀಕರಣಗೊಂಡು ತಮ್ಮ ಕುಟುಂಬದ ಜತೆ ಸುಂದರ ಜೀವನ ನಡೆಸಿದರೆ ಕಾರ್ಯಕ್ರಮದ ಉದ್ದೇಶ ಸಾರ್ಥಕವಾಗುತ್ತದೆ ಎಂದರು.
ಸಹಾಯಕ ಜೈಲರ್ ಎಫ್.ಜಿ. ಬಾರಿಕೇರ್, ಸೈಕ್ಯಾಟ್ರಿಕ್ ಕೌನ್ಸಲರ್ ಎ.ಕೆ. ಹಾವೋಜಿ ಹಾಗೂ ಕಾರಾಗೃಹದ ಇತರ ಅಧಿಕಾರಿ, ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net