ಸಂಚಾರ ವ್ಯವಸ್ಥೆ ಸುಗಮಗೊಳಿಸಿ

ಸಂಚಾರ ದಟ್ಟನೆ ನಿಯಂತ್ರಣಕ್ಕೆ ಒತ್ತಾಯಿಸಿ ಕುಕನೂರು ಹಿತರಕ್ಷಣಾ ಸಮಿತಿ ಸದಸ್ಯರು ಪಿಎಸ್‌ಐ ಗುರುರಾಜ್‌ಗೆ ಮಂಗಳವಾರ ಮನವಿ ಸಲ್ಲಿಸಿದರು. ಸಮಿತಿ ಸಹ ಸಂಚಾಲಕ   ಮಂಜುನಾಥ ನಾಡಗೌಡ, ಪದಾಧಿಕಾರಿಗಳಾದ ಅಂದಪ್ಪ ಜವಳಿ, ರಶೀದ್ ಹಣಜಗೇರಿ, ಕಳಕೇಶ್ ಹತ್ತಿಕಟಗಿ ಇದ್ದರು.
ಸಂಚಾರ ದಟ್ಟನೆ ನಿಯಂತ್ರಣಕ್ಕೆ ಒತ್ತಾಯಿಸಿ ಕುಕನೂರು ಹಿತರಕ್ಷಣಾ ಸಮಿತಿ ಸದಸ್ಯರು ಪಿಎಸ್‌ಐ ಗುರುರಾಜ್‌ಗೆ ಮಂಗಳವಾರ ಮನವಿ ಸಲ್ಲಿಸಿದರು. ಸಮಿತಿ ಸಹ ಸಂಚಾಲಕ ಮಂಜುನಾಥ ನಾಡಗೌಡ, ಪದಾಧಿಕಾರಿಗಳಾದ ಅಂದಪ್ಪ ಜವಳಿ, ರಶೀದ್ ಹಣಜಗೇರಿ, ಕಳಕೇಶ್ ಹತ್ತಿಕಟಗಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕುಕನೂರು ಹಿತರಕ್ಷಣಾ ಸಮಿತಿ ಒತ್ತಾಯ
ಕುಕನೂರು: ಪಟ್ಟಣದ ಪ್ರಮುಖ ರಸ್ತೆಗಳ ಸಂಚಾರ ದಟ್ಟನೆ ನಿಯಂತ್ರಿಸಿ ಸುಂಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಒತ್ತಾಯಿಸಿ ಕುಕನೂರು ಹಿತರಕ್ಷಣಾ ಸಮಿತಿ ಸದಸ್ಯರು ಪಟ್ಟಣದ ಪೊಲೀಸ್ ಠಾಣೆಗೆ ತೆರಳಿ ಪಿಎಸ್‌ಐ ಗುರುರಾಜ್‌ಗೆ ಮಂಗಳವಾರ ಮನವಿ ಸಲ್ಲಿಸಿದರು.
ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಎಸ್‌ಎಫ್‌ಎಸ್ ಶಾಲೆಯಿಂದ ವಿದ್ಯಾನಂದ ಗುರುಕುಲ ಶಾಲೆವರೆಗೆ ವಾಹನಗಳ ವೇಗ ನಿಯಂತ್ರಣ ಹಾಗೂ ಸಂತೆ ಸಮಯದಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆಗೆ ಕ್ರಮ ವಹಿಸಬೇಕು. ಶಾಲಾ ವಲಯದಲ್ಲಿ ಬ್ಯಾರಿಕೆಡ್ ಅಳವಡಿಸಿ ವಾಹನಗಳ ವೇಗ ನಿಯಂತ್ರಿಸಬೇಕು. ಪ್ರತಿ ಶುಕ್ರವಾರ ನಡೆಯುವ ಸಂತೆ ಸಂದರ್ಭದಲ್ಲಿ ರಸ್ತೆ ಎರಡೂ ಬದಿಗಳಲ್ಲಿ ವ್ಯಾಪಾರ ನಡೆಯುತ್ತಿರುವುದರಿಂದ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಹೀಗಾಗಿ ವೀರಭದ್ರಪ್ಪ ವೃತ್ತದಿಂದ ಒಂದು ಕಡೆ ಸಂಚಾರ ವ್ಯವಸ್ಥೆ ಮಾಡಿ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು ಎಂದು ಒತ್ತಾಯಿಸಿದರು.
ಸಮಿತಿ ಸಹ ಸಂಚಾಲಕ ಮಂಜುನಾಥ ನಾಡಗೌಡ, ಪದಾಧಿಕಾರಿಗಳಾದ ಅಂದಪ್ಪ ಜವಳಿ, ರಶೀದ್ ಹಣಜಗೇರಿ, ಕಳಕೇಶ್ ಹತ್ತಿಕಟಗಿ, ಗಂಗಾಧರ ನಾರಾಯಣಿ, ದೇವಪ್ಪ ರಾಟಿಮನಿ, ಕನಕಪ್ಪ ಬ್ಯಾಡರ್, ನಾರಾಯಣಪ್ಪ ಮುಖಪುರಿ, ಗಿರಿಧರ್ ನಿಲೋಗಲ್, ಮಹಾಂತೇಶ ಹೂಗಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net