ಸಿದ್ಧಾಪುರ ಸಮೀಪದ ಬರಗೂರು ಕ್ಯಾಂಪ್‌ನ ಶ್ರೀರಾಮ ದೇವಸ್ಥಾನಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 2 ಲಕ್ಷ ರೂ. ಡಿಡಿ ಹಸ್ತಾಂತರಿಸಲಾಯಿತು. ಯೋಜನೆಯ ವಲಯ ಮೇಲ್ವಿಚಾರಕ ಎಸ್.ಶಿವ ನಾಯ್ಕ, ದೇವಸ್ಥಾನ ಕಮಿಟಿ ಅಧ್ಯಕ್ಷ ಸಿ.ಎಚ್.ಕೃಷ್ಣರಾವ್, ಗ್ರಾಪಂ ಮಾಜಿ ಅಧ್ಯಕ್ಷೆ ನಿರ್ಮಲಾ ಯಂಕಪ್ಪ ಇತರರಿದ್ದರು.
ಸಿದ್ದಾಪುರ: ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಧಾರ್ಮಿಕ ಕ್ಷೇತ್ರಗಳ ಪುನರುತ್ಥಾನಕ್ಕೆ ಕೊಡುಗೆಯಾಗಿ ಸಹಾಯಧನ ನೀಡಲಾಗುತ್ತಿದೆ ಎಂದು ಕಾರಟಗಿ ತಾಲೂಕು ಯೋಜನಾಧಿಕಾರಿ ನಿಂಗಪ್ಪ ಡಿ.ಅಗಸರ ಹೇಳಿದರು.
ಸಮೀಪದ ಬರಗೂರು ಕ್ಯಾಂಪ್‌ನ ಶ್ರೀರಾಮ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನಿಂದ ಮಂಜೂರಾದ 2 ಲಕ್ಷ ರೂ. ಸಹಾಯಧನದ ಡಿಡಿಯನ್ನು ದೇವಸ್ಥಾನದ ಕಮಿಟಿಗೆ ಶನಿವಾರ ಹಸ್ತಾಂತರಿಸಿ ಮಾತನಾಡಿದರು. ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯಿಂದ ವಿವಿಧ ಜನಪರ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.
ಯೋಜನೆಯ ವಲಯ ಮೇಲ್ವಿಚಾರಕ ಎಸ್.ಶಿವ ನಾಯ್ಕ, ದೇವಸ್ಥಾನ ಕಮಿಟಿ ಅಧ್ಯಕ್ಷ ಸಿ.ಎಚ್.ಕೃಷ್ಣರಾವ್, ಗ್ರಾಪಂ ಮಾಜಿ ಅಧ್ಯಕ್ಷೆ ನಿರ್ಮಲಾ ಯಂಕಪ್ಪ, ಪ್ರಮುಖರಾದ ಸಂಜೀವ್, ದುರ್ಗಾ ರಾವ್, ಶ್ರೀನಿವಾಸ್, ಶಿರಡಿ ಸುಬ್ರಮಣ್ಯ, ಚಂದ್ರಶೇಖರ, ಶರಣಬಸವ ರೆಡ್ಡಿ ಇತರರಿದ್ದರು.