ಕವಲೂರು: ಗ್ರಾಪಂ ವ್ಯಾಪ್ತಿಯ ಸಂಜೀವಿನಿ ಎನ್.ಅರ್.ಎಲ್.ಎಂ ಯೋಜನೆಯಡಿ ಶ್ರೀ ಕಲ್ಪವೃಕ್ಷ ಸಂಜೀವಿನಿ ಒಕ್ಕೂಟದ ಸ್ವ ಸಹಾಯ ಸಂಘದ ಸದಸ್ಯರು ರಿವಾರ್ಡ್ ಜಲಾನಯನ ಯೋಜನೆಯ ಸಹಾಯಧನ ಮತ್ತು ಒಕ್ಕೂಟದ ಸಿಐಎಫ್ ಸಾಲದಿಂದ ಕೋಳಿ ಸಾಕಾಣಿಕೆ ಆರಂಭಿಸಿದ್ದು, ಸ್ಥಳೀಯ ಸಹಿಪ್ರಾ ಶಾಲೆಗೆ ಮೊಟ್ಟೆ ಪೂರೈಕೆಗೆ ಬುಧವಾರ ಚಾಲನೆ ನೀಡಲಾಯಿತು.
ಒಕ್ಕೂಟದ ಅಧ್ಯಕ್ಷೆ ರೇಣುಕಾ ಜೋಗಿನ ಮಾತನಾಡಿ, ಗುಣಮಟ್ಟದ ಮೊಟ್ಟೆಗಳನ್ನು ನಿಗದಿತ ಸಮಯಕ್ಕೆ ಸಂಘದ ಮಹಿಳೆಯರೇ ಪೂರೈಸುತ್ತಾರೆ. ಇದರಿಂದ ಸರ್ಕಾರಿ ಶಾಲೆಗೆ ಹಾಗೂ ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸಲು ಸಹಕಾರಿಯಾಗಿದೆ ಎಂದರು.