ಅಳವಂಡಿ: ಮಾನಸಿಕ ಮತ್ತು ದೈಹಿಕ ಶಕ್ತಿ ನೀಡುವ ಆರೋಗ್ಯದ ಮೂಲಮಂತ್ರ ಯೋಗ. ವಿಶ್ವಕ್ಕೆ ಭಾರತ ನೀಡಿದ ಅನನ್ಯ ಕಾಣಿಕೆ ಯೋಗ ಎಂದು ಮುಖ್ಯಶಿಕ್ಷಕಿ ಜಯಾ ತಳಗೇರಿ ಹೇಳಿದರು. ಗ್ರಾಮದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮತೋಲಿತ ಮನಸ್ಸು ಮತ್ತು ದೇಹದ ಆರೋಗ್ಯಕ್ಕೆ ಯೋಗ ಉತ್ತಮ ಅಭ್ಯಾಸ ಎಂದರು. ಶಿಕ್ಷಕಿಯರಾದ ಫಕೀರಮ್ಮ, ಸುನಿತಾ, ಸುಗಂಧಾ, ಇಸ್ರತ್ ಬಾನು, ನಿಲಯ ಮೇಲ್ವಿಚಾರಕಿ ಚನ್ನಮ್ಮ ಚಿನ್ನೂರ ಇತರರಿದ್ದರು.