ಬಾಲ್ಯವಿವಾಹ ನಿರ್ಮೂಲನೆಗೆ ಸಹಕರಿಸಿ

ಕೋಳೂರಿಗೆ ಬಾಲ್ಯವಿವಾಹಮುಕ್ತ ರಥ ಆಗಮಿಸಿದಾಗ ಮಕ್ಕಳು ಬಾಲ್ಯವಿವಾಹ ವಿರೋಧಿ ಜಾಗೃತಿ ಬಿತ್ತಿ ಪತ್ರಗಳನ್ನು ಪ್ರದರ್ಶಿಸಿದರು. ಪಿಡಿಒ ಶೇಖರ ಮಡಿವಾಳರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಮೇಶ, ಸ್ಪಂದನ ಸಂಸ್ಥೆ ಯೋಜನಾ ಸಂಯೋಜಕ ಶಂಕರ, ಮುಖ್ಯಶಿಕ್ಷಕ ಹಸನಸಾಬ್, ಐಸಿಡಿಎಸ್ ಮೇಲ್ವಿಚಾರಕಿ ಪ್ರೀತಿ ಕೋರೆ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಅಭಿಯಾನ

ಬಾಲ್ಯವಿವಾಹ ನಿರ್ಮೂಲನೆಗೆ ಸಹಕರಿಸಿ

ಅಳವಂಡಿ: ಬಾಲ್ಯವಿವಾಹ ತಡೆಯುವ ಜತೆಗೆ ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಪಿಡಿಒ ಶೇಖರ ಮಡಿವಾಳರ ಹೇಳಿದರು.
ಸಮೀಪದ ಕೋಳೂರು ಗ್ರಾಮದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ, ಮಕ್ಕಳ ಸಹಾಯವಾಣಿ ಹಾಗೂ ಸ್ಪಂದನ ಸಂಸ್ಥೆ ಸಹಯೋಗದಲ್ಲಿ ಬಾಲ್ಯವಿವಾಹಮುಕ್ತ ಭಾರತಕ್ಕಾಗಿ 100 ದಿನಗಳ ಅಭಿಯಾನ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಬಾಲ್ಯವಿವಾಹ ಮುಕ್ತಿ ರಥವನ್ನು ಸ್ವಾಗತಿಸಿ ಮಾತನಾಡಿದರು.
ಬಾಲ್ಯವಿವಾಹ ನಿರ್ಮೂಲನೆಗೆ ಸರ್ವರು ಪಣತೊಡಬೇಕು. ಬಾಲ್ಯವಿವಾಹದಿಂದ ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಮೇಲೆ ಪರಿಣಾಮ ಬೀರಲಿದೆ. ತಾಯಿ ಮತ್ತು ಶಿಶು ಮರಣ ಪ್ರಮಾಣ ಹಾಗೂ ಅನಾರೋಗ್ಯ ಹೆಚ್ಚಾಗುತ್ತದೆ ಎಂದರು. ಬಾಲ್ಯವಿವಾಹ ಮುಕ್ತಿ ರಥ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮಕ್ಕಳು ಬಾಲ್ಯವಿವಾಹ ವಿರೋಧಿ ಜಾಗೃತಿ ಬಿತ್ತಿ ಪತ್ರಗಳನ್ನು ಪ್ರದರ್ಶಿಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಮೇಶ, ಸ್ಪಂದನ ಸಂಸ್ಥೆ ಯೋಜನಾ ಸಂಯೋಜಕ ಶಂಕರ, ಮುಖ್ಯಶಿಕ್ಷಕ ಹಸನಸಾಬ್, ಐಸಿಡಿಎಸ್ ಮೇಲ್ವಿಚಾರಕಿ ಪ್ರೀತಿ ಕೋರೆ, ಪ್ರಮುಖ ಮಾರುತಿ ವಾಲಿಕಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net