ತಾಲೂಕು ಯೋಜನಾಧಿಕಾರಿ ಶಾಂತಾನಾಯ್ಕ ಮಾತನಾಡಿ, ಟ್ರಸ್ಟ್‌ನಿಂದ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶ್ರಮಿಸುತ್ತಿದೆ. ಅಂತರ್ಜಲ ಹೆಚ್ಚಳ ಪೂರಕ ಯೋಜನೆಗಳು ಜಾರಿಯಲ್ಲಿವೆ ಎಂದರು. ಅಭಿಯಾನದಲ್ಲಿ ಆರೋಗ್ಯ, ಯೋಗ ಮತ್ತು ಶಿಕ್ಷಣ ಕುರಿತು ಮಾಹಿತಿ ನೀಡಲಾಯಿತು. ಗಂಗಾವತಿ ಸಿಟಿ ವಲಯದ ಸಾಯಿನಗರ ಕಾರ್ಯಕ್ಷೇತ್ರದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಉಪಪ್ರಾಚಾರ್ಯ ಸೋಮಶೇಖರ, ಟ್ರಸ್ಟ್ ವಲಯ ಮೇಲ್ವಿಚಾರಕ ಬಿ.ನೀಲರಾಜ, ಸೇವಾ ಪ್ರತಿನಿಧಿ ಮಂಜುಳಾ ಹಾಗೂ ವಿದ್ಯಾರ್ಥಿಗಳಿದ್ದರು.