ುಟ್‌ಪಾತ್ ಮೇಲಿದ್ದ ಟೆಂಟ್, ಮೆಟ್ಟಿಲು ಮತ್ತು ಆಸರೆ ಕಟ್ಟಡಗಳನ್ನು ತೆರವುಗೊಳಿಸಲಾಗಿದ್ದು, ಕಟ್ಟಡ ತ್ಯಾಜ್ಯವನ್ನು ರಸ್ತೆಯಲ್ಲಿಳಿಸಲಾಗಿತ್ತು. ಇದರಿಂದ ಸಂಚಾರಕ್ಕೆ ತೊಂದರೆಯಾದ ಬಗ್ಗೆ ವಿಜಯವಾಣಿಯಲ್ಲಿ ಮೇ 6ರಂದು ನಿರ್ದಿಷ್ಟ ಗುರಿ ಇಲ್ಲದೆ ಒತ್ತುವರಿ ತೆರವು ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ಎಚ್ಚೆತ್ತುಕೊಂಡ ಅಧಿಕಾರಿಗಳು ಬೆಳಗಿನ ಜಾವದಿಂದಲೇ ಜೆಸಿಬಿ, ಟಿಪ್ಪರ್ ಮೂಲಕ ತ್ಯಾಜ್ಯ ತೆರವು ಆಪರೇಷನ್ ಕೈಗೆತ್ತಿಕೊಂಡಿದ್ದು, ಬಹುತೇಕ ರಸ್ತೆಯಲ್ಲಿ ತೆರವುಗೊಳಿಸಲಾಗಿದೆ. ಶುಚಿತ್ವ ಕಾಪಾಡದೇ, ಶುದ್ಧ ನೀರೂ ಇಡದೆ ಅನಾರೋಗ್ಯಕ್ಕೆ ಕಾರಣವಾಗುತ್ತಿರುವ ನೀರಿನ ಅರವಟಿಗೆಗಳನ್ನು ತೆರವುಗೊಳಿಸದೆ ಕೈಬಿಟ್ಟಿರುವುದು ಊಹಾಪೋಹಗಳಿಗೆ ಕಾರಣವಾಗಿದೆ. ವರ್ಷದಿಂದ ರಸ್ತೆಯಲ್ಲೇ ಉಳಿದುಕೊಂಡ ಸಿಬಿಎಸ್ ವೃತ್ತ ಬಳಿಯ ನೀರಿನ ಅರವಟಿಗೆ ಉಳಿಸಲು ಪ್ರಭಾವಿಗಳೊಬ್ಬರು ನಗರಸಭೆ ಸಿಬ್ಬಂದಿ ಮೇಲೆ ಪ್ರಭಾವ ಬೀರಿದ್ದರಿಂದ ತೆರವಾಗಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಯೇ ಉತ್ತರ ನೀಡಬೇಕಿದೆ ಎನ್ನುತ್ತಾರೆ ಸ್ಥಳೀಯರು.