ಮನೆ ಮನೆಗೆ ಭೇಟಿ ನೀಡಿದ ಅಧಿಕಾರಿಗಳ ತಂಡ, ವೈಯಕ್ತಿಕ ಶೌಚಗೃಹ ಅಗತ್ಯತೆ ಮತ್ತು ಅದರ ಮಹತ್ವ ಕುರಿತು ಮಾಹಿತಿ ನೀಡಿತು. ಕೆಲ ಕುಟುಂಬಗಳನ್ನು ಮನವೊಲಿಸಿ, ಕಾಮಗಾರಿ ಆರಂಭಿಸಲು ಸಲಹೆ ನೀಡಿತು. ತಾಪಂ ಇಒ ರಾಮರೆಡ್ಡಿ ಪಾಟೀಲ್, ಸಹಾಯಕ ನಿರ್ದೇಶಕ ಮಹಾಂತಗೌಡ ಪಾಟೀಲ್, ಪಿಡಿಒ ರವೀಂದ್ರ ಕುಲಕರ್ಣಿ, ಎಸ್‌ಬಿಎಂ ಯೋಜನೆ ಜಿಲ್ಲಾ ಸಮಾಲೋಚಕರಾದ ಹುಡೇದ್ ಬಸಮ್ಮ, ಮಾರುತಿ ನಾಯ್ಕರ್, ಎಸ್‌ಡಿಎ ಭಾರತಿ, ಐಇಸಿ ಸಂಯೋಜಕ ಬಾಳಪ್ಪ ತಾಳಕೇರಿ, ಸಿಬ್ಬಂದಿ ಆನಂದ, ಸೋಮನಾಥ ಇತರರಿದ್ದರು.