ಮೃತರ ಕುಟುಂಬಕ್ಕೆ ಸಾಂತ್ವನ

ತೀರ್ಥಹಳ್ಳಿಯಲ್ಲಿ ಗುಡ್ಡ ಕುಸಿದು ಮೃತಪಟ್ಟ ಸಿದ್ದಾಪುರ ಸಮೀಪದ ಕಕ್ಕರಗೋಳದ ನಿವಾಸಿಗಳ ಮೃತರ ಕುಟುಂಬಸ್ಥರಿಗೆ ಕೊಪ್ಪಳದ ಮಾಜಿ ಶಾಸಕ ಬಸವರಾಜ ಹಿಟ್ನಾಳ ಧನಸಹಾಯ ಮಾಡಿದರು. ಮುಖಂಡರಾದ ಜನಗಂಡೆಪ್ಪ ಪೂಜಾರ್, ಶರಣಪ್ಪ ಪರಕಿ ಇತರರಿದ್ದರು.
ತೀರ್ಥಹಳ್ಳಿಯಲ್ಲಿ ಗುಡ್ಡ ಕುಸಿದು ಮೃತಪಟ್ಟ ಸಿದ್ದಾಪುರ ಸಮೀಪದ ಕಕ್ಕರಗೋಳದ ನಿವಾಸಿಗಳ ಮೃತರ ಕುಟುಂಬಸ್ಥರಿಗೆ ಕೊಪ್ಪಳದ ಮಾಜಿ ಶಾಸಕ ಬಸವರಾಜ ಹಿಟ್ನಾಳ ಧನಸಹಾಯ ಮಾಡಿದರು. ಮುಖಂಡರಾದ ಜನಗಂಡೆಪ್ಪ ಪೂಜಾರ್, ಶರಣಪ್ಪ ಪರಕಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಬಸವರಾಜ ಹಿಟ್ನಾಳರಿಂದ 1.5ಲಕ್ಷ ರೂ. ನೆರವು
  • ಸಿದ್ದಾಪುರ ಕಕ್ಕರಗೋಳ ಮಾಜಿ ಶಾಸಕ ಸಾಂತ್ವನ
ಸಿದ್ದಾಪುರ: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರ ಬಳಿ ಗುಡ್ಡ ಕುಸಿದು ಮೃತಪಟ್ಟ ಕಕ್ಕರಗೋಳದ ನಿವಾಸಿಗಳ ಕುಟುಂಬಸ್ಥರಿಗೆ ಕೊಪ್ಪಳದ ಮಾಜಿ ಶಾಸಕ ಬಸವರಾಜ ಹಿಟ್ನಾಳ ಸಾಂತ್ವನ ಹೇಳಿದರು.
ಬಳಿಕ ಮಾತನಾಡಿದ ಅವರು, ಇಂಥ ದುರ್ಘಟನೆ ನಡೆಯಬಾರದಿತ್ತು. ಆದರೂ, ನಡೆದು ಹೋಗಿದೆ. ಕುಟುಂಬ ನಿರ್ವಹಣೆಗೆ ದುಡಿಯಲು ಹೋದವರು ಇಂದು ನಮ್ಮೊಂದಿಗಿಲ್ಲ ಎನ್ನುವುದನ್ನು ಕುಟುಂಬಸ್ಥರು ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಭಗವಂತ ದುಃಖ ಭರಿಸುವ ಶಕ್ತಿ ಈ ಕುಟುಂಬಕ್ಕೆ ನೀಡಲಿ. ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ಸಹಾಯ ಮಾಡಿದ್ದೇನೆ. ಮಕ್ಕಳ ಭವಿಷ್ಯ ಚೆನ್ನಾಗಿರಲಿ ಎಂದರು. ಕುಟುಂಬಸ್ಥರಿಗೆ 1.5ಲಕ್ಷ ರೂ. ಧನಸಹಾಯ ಮಾಡಿದರು. ಮುಖಂಡರಾದ ಜನಗಂಡೆಪ್ಪ ಪೂಜಾರ್, ಶರಣಪ್ಪ ಪರಕಿ, ಅಮರೇಶ್, ಹನಮಂತಪ್ಪ ಶ್ಯಾಲಿಗನೂರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net