ಗಂಗಾವತಿ ಕೃಷಿ ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೃಷಿ ಸಖಿಯರ 3ನೇ ಹಂತದ ತರಬೇತಿ ಕಾರ್ಯಾಗಾರದ ಸಮಾರೋಪದಲ್ಲಿ ಕೃಷಿ ಸಖಿಯರೊಂದಿಗೆ ಕೆವಿಕೆ ಮುಖ್ಯಸ್ಥ ಡಾ.ರಾಘವೇಂದ್ರ ಎಲಿಗಾರ್, ತಜ್ಞರಾದ ಡಾ.ಮಲ್ಲೇಶ, ಡಾ.ಕವಿತಾ ಉಳ್ಳಿಕಾಶಿ ಇತರರಿದ್ದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ರಾಘವೇಂದ್ರ ಎಲಿಗಾರ್ ಸಲಹೆ
ತರಬೇತಿ ಕಾರ್ಯಾಗಾರದ ಸಮಾರೋಪ
ಗಂಗಾವತಿ: ಕೃಷಿ ಕ್ಷೇತ್ರ ವಿಸ್ತರಣೆಯಲ್ಲಿ ಕೃಷಿ ಸಖಿಯರ ಪಾತ್ರ ಮುಖ್ಯವಾಗಿದ್ದು, ಇಳುವರಿ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ರಾಘವೇಂದ್ರ ಎಲಿಗಾರ್ ಹೇಳಿದರು.
ನಗರದ ಕೃಷಿ ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಕೃಷಿ ವಿಜ್ಞಾನ ಕೇಂದ್ರ, ಸಂಜೀವಿನಿ ಮತ್ತು ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಹಮ್ಮಿಕೊಂಡಿದ್ದ ಕೃಷಿ ಸಖಿಯರಿಗೆ 3ನೇ ಹಂತದ ತರಬೇತಿ ಕಾರ್ಯಾಗಾರದ ಸಮಾರೋಪದಲ್ಲಿ ಗುರುವಾರ ಮಾತನಾಡಿದರು.
ಆಧುನಿಕ ಬೇಸಾಯದ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕಿದ್ದು, ಕೃಷಿ ಇಲಾಖೆ ಯೋಜನೆಗಳ ಅನುಷ್ಠಾನಕ್ಕೆ ಗಮನಹರಿಸಬೇಕು. ಕೃಷಿ ವಿಜ್ಞಾನ ಕೇಂದ್ರ ಆವಿಷ್ಕರಿಸುವ ಯೋಜನೆಗಳ ಬಗ್ಗೆಯೂ ತಿಳಿವಳಿಕೆ ಮೂಡಿಸುವಂತೆ ಸಲಹೆ ನೀಡಿದರು.
ಬೇಸಾಯಶಾಸ ತಜ್ಞ ಡಾ.ಮಲ್ಲೇಶ ಮಾತನಾಡಿ, ಆಧುನಿಕತೆಗೆ ತಕ್ಕಂತೆ ಕೃಷಿ ಪದ್ಧತಿ ಬದಲಾಗಬೇಕಿದ್ದು, ಲವತ್ತತೆ ಉಳಿಸಿಕೊಳ್ಳುವ ಬೇಸಾಯ ಕ್ರಮಗಳನ್ನು ರೈತರು ಅಳವಡಿಸಿಕೊಳ್ಳುವಂತೆ ಸಲಹೆ ನೀಡಲು ಕೃಷಿ ಸಖಿಯರು ಮುಂದಾಗಲಿ ಎಂದರು.
ಯುವ ಕೃಷಿಕ, ಸಮಾಜದ ಜಿಲ್ಲಾಧ್ಯಕ್ಷ ಕನಕಪ್ಪ ಮಳಗಾವಿ, ಕೃಷಿಕ ಸಮಾಜದ ಕನಕಗಿರಿ ತಾಲೂಕು ಘಟಕದ ಅಧ್ಯಕ್ಷ ಶರಣಪ್ಪ ಹುಡೇಜಾಲಿ, ತಜ್ಞರಾದ ಡಾ.ಕವಿತಾ ಉಳ್ಳಿಕಾಶಿ, ಡಾ.ಆರ್.ಜ್ಯೋತಿ, ಡಾ.ಜೆ. ರಾಧಾ, ಆರ್.ಎಂ.ರೇವತಿ ಇತರರಿದ್ದರು.