ಶ್ರೀ ನೀಲಕಂಠೇಶ್ವರ ದೇವಾಲಯ ಸಮಿತಿ ಮತ್ತು ಕುರುಹಿನಶೆಟ್ಟಿ ಸಮಾಜದಿಂದ ಹಮ್ಮಿಕೊಳ್ಳಾಗಿತ್ತು. ಮಂಗಲೋತ್ಸವ ಹಿನ್ನೆಲೆಯಲ್ಲಿ ಉಟಕನೂರು ಶಿವಯೋಗಿಗಳ ಭಾವಚಿತ್ರವನ್ನು ದೇವಾಲಯದಿಂದ ನಗರದಾದ್ಯಂತ ವಾದ್ಯಮೇಳ, ಕುಂಭ, ಕಳಸದೊಂದಿಗೆ ಅದ್ದೂರಿಯಾಗಿ ನೆರವೇರಿಸಲಾಯಿತು. ದೇವಾಲಯದಲ್ಲಿ ಮೂರ್ತಿಗೆ ವಿಶೇಷ ಪೂಜೆ, ಅಭಿಷೇಕ, ಹೂವಿನ ಅಲಂಕಾರ ಮತ್ತು ಸಾಮೂಹಿಕ ಪ್ರಸಾದ ವಿತರಣೆ ಜರುಗಿತು. ಸಂಜೆ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಸಾಧಕರನ್ನು ಸನ್ಮಾನಿಸಲಾಯಿತು. ಸಮಾಜದ ಪ್ರಮುಖರಾದ ಎಂ.ಮಲ್ಲಿಕಾರ್ಜುನ ನಾಗಪ್ಪ, ಎಂ.ರವೀಂದ್ರನಾಥ, ಪುರಾಣ ಪ್ರಚನಕಾರ ಶ್ರವಣಕುಮಾರ ಶಾಸಿ, ಪ್ರಮುಖರಾದ ಶ್ರೀನಿವಾಸ, ಮಂಜುನಾಥ ಕುರುಗೋಡ ಇತರರಿದ್ದರು.