ವರ್ಷದೊಳಗೆ ಕುಷ್ಟಗಿ ಉಪಕೇಂದ್ರ ಕಾಮಗಾರಿ ಪೂರ್ಣಗೊಳಿಸಿ

ಜಿಲ್ಲೆಯ ಕುಷ್ಟ ತಾಲೂಕಿನಲ್ಲಿ ನಿಮಾರ್ಣವಾಗುತ್ತಿರುವ ವಿದ್ಯುತ್​ ಉಪಕೇಂದ್ರದ ಕಾಮಗಾರಿ ಸ್ಥಳಕ್ಕೆ ಕೆಪಿಟಿಸಿಎಲ್​ ಎಂಡಿ ಡಾ. ವಿ. ರಾಮ್​ ಪ್ರಸಾತ್​ ಮನೋಹರ್​ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲೆಯ ಕುಷ್ಟ ತಾಲೂಕಿನಲ್ಲಿ ನಿಮಾರ್ಣವಾಗುತ್ತಿರುವ ವಿದ್ಯುತ್​ ಉಪಕೇಂದ್ರದ ಕಾಮಗಾರಿ ಸ್ಥಳಕ್ಕೆ ಕೆಪಿಟಿಸಿಎಲ್​ ಎಂಡಿ ಡಾ. ವಿ. ರಾಮ್​ ಪ್ರಸಾತ್​ ಮನೋಹರ್​ ಭೇಟಿ ನೀಡಿ ಪರಿಶೀಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕೆಪಿಟಿಸಿಎಲ್​ ಎಂಡಿ ಸೂಚನೆ
  • ವಿದ್ಯುತ್​ ಉಪಕೇಂದ್ರ ಕಾಮಗಾರಿ ಸ್ಥಳಕ್ಕೆ ಭೇಟಿ
ಕೊಪ್ಪಳ : ಉತ್ತರ ಕರ್ನಾಟಕದಲ್ಲಿ ಉತ್ಪಾದನೆಯಾಗುತ್ತಿರುವ ಹಸಿರು ಇಂಧನವನ್ನು ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಗೆ ರವಾನಿಸುವ ಮಹತ್ವದ ಯೋಜನೆಯಾದ ಜಿಲ್ಲೆಯ ಕುಷ್ಟಗಿ 400 ಕೆವಿ ವಿದ್ಯುತ್​ ಉಪಕೇಂದ್ರ ಕಾಮಗಾರಿಯನ್ನು ಮಾರ್ಚ್​ 2027ರೊಳಗೆ ಪೂರ್ಣಗೊಳಿಸುವಂತೆ ಕರ್ನಾಟಕ ವಿದ್ಯುತ್​ ಪ್ರಸರಣ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಡಾ. ವಿ. ರಾಮ್​ ಪ್ರಸಾತ್​ ಮನೋಹರ್​ ಸೂಚನೆ ನೀಡಿದರು.
ಜಿಲ್ಲೆಯ ಕುಷ್ಟಗಿಯಲ್ಲಿ ನಿಮಾರ್ಣವಾಗುತ್ತಿರುವ ಬೃಹತ್​ ವಿದ್ಯುತ್​ ಉಪಕೇಂದ್ರದ ಕಾಮಗಾರಿ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.
ನಂತರ ಜಿಲ್ಲಾಡಳಿತ ಭವನದಲ್ಲಿ ಡಿಸಿ ಡಾ. ಸುರೇಶ ಇಟ್ನಾಳ, ಎಸ್ಪಿ ಡಾ. ರಾಮ್​ ಎಲ್​. ಅರಸಿದ್ದಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಉಪಕೇಂದ್ರಕ್ಕೆ ವಿದ್ಯುತ್​ ಸಂಪರ್ಕ ಕಲ್ಪಿಸಲು ಡೋಣಿ&ಕುಷ್ಟಗಿ ಫೀಡರ್​ ಮಾರ್ಗ ಅತ್ಯಂತ ಪ್ರಮುಖವಾಗಿದ್ದು, ಈ ಮಾರ್ಗ ಹಸಿರು ಇಂಧನ ಸಾಗಣೆ ಜೀವನಾಡಿಯಾಗಿದೆ. ಫೀಡರ್​ ಮಾರ್ಗದ ಕಾಮಗಾರಿಗೆ ಕೆಲವೆಡೆ ಮಾರ್ಗಾಧಿಕಾರ ಸಮಸ್ಯೆಗಳು ಅಡ್ಡಿಯಾಗಿರುವುದರಿಂದ, ಅವುಗಳನ್ನು ನಿವಾರಿಸಲು ಎಂಜಿನಿಯರಿಂಗ್​ ತಂಡಗಳಿಗೆ ಮೂರು ತಿಂಗಳ ಗಡುವು ನೀಡಿದರು.
ಭೂಸ್ವಾಧಿನ ಹಾಗೂ ಆರ್​ಒಡಬ್ಲ್ಯು ಸಮಸ್ಯೆ ಪರಿಹರಿಸಲು ಜಿಲ್ಲಾಡಳಿತ ಮತ್ತು ಪೊಲೀಸ್​ ಇಲಾಖೆ ಅಗತ್ಯ ಸಹಕಾರ ನೀಡಬೇಕು. ಸ್ಥಳಿಯವಾಗಿ ಉತ್ಪಾದನೆಯಾಗುವ ಸೌರ ಮತ್ತು ಪವನ ವಿದ್ಯುತ್​ ಅನ್ನು ರಾಜ್ಯದ ಮುಖ್ಯ ಗ್ರಿಡ್​ಗೆ ಸಂಪರ್ಕಿಸುವ ಪ್ರಮುಖ ಕೇಂದ್ರವಾಗಿ ಈ ಉಪಕೇಂದ್ರ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.
ಉಪಕೇಂದ್ರದ ಕಾಮಗಾರಿ ಉತ್ತಮ ವೇಗದಲ್ಲಿ ಸಾಗುತ್ತಿದ್ದರೂ, ಫೀಡರ್​ ಮಾರ್ಗ ಪೂರ್ಣಗೊಳ್ಳದಿದ್ದರೆ ಉಪಕೇಂದ್ರ ಕಾರ್ಯಾರಂಭ ಸಾಧ್ಯವಾಗುವುದಿಲ್ಲ. ಹೀಗಾಗಿ ಡೋಣಿ&-ಕುಷ್ಟಗಿ ವಿದ್ಯುತ್​ ಮಾರ್ಗದ ಕಾಮಗಾರಿಗೆ ವಿಶೇಷ ಆದ್ಯತೆ ನೀಡಿ. ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ಪ್ರಸರಣ ಮೂಲಸೌಕರ್ಯಗಳ ಅಭಿವೃದ್ಧಿ ಅತ್ಯಗತ್ಯವಾಗಿದೆ. ಕುಷ್ಟಗಿ ಉಪಕೇಂದ್ರ ಹಾಗೂ ಡೋಣಿ-&ಕುಷ್ಟಗಿ ವಿದ್ಯುತ್​ ಮಾರ್ಗವು ಕಲ್ಯಾಣ ಕರ್ನಾಟಕ ಭಾಗದ ವಿದ್ಯುತ್​ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರಲಿವೆ ಎಂದರು.
ಇಂಧನ ಸಚಿವ ಕೆ.ಜೆ. ಜಾರ್ಜ್​ ಮಾರ್ಗದರ್ಶನದಂತೆ ಯೋಜನೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಕೆಪಿಟಿಸಿಎಲ್​ ಹಾಗೂ ಜಿಲ್ಲಾಡಳಿತ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಲಿದ್ದು, ಮಾರ್ಚ್​ 2027ರೊಳಗೆ ಸಂಪೂರ್ಣ ವ್ಯವಸ್ಥೆ ಕಾರ್ಯಾಚರಣೆಗೆ ಸಜ್ಜಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net