ಗಂಗಾವತಿ: ಸಮಾಜ ಸಂಘಟನೆ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾದ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಿದ್ದು, ಬಹುಕಾಲ ಬೇಡಿಕೆಯಾಗಿತ್ತು ಎಂದು ಶಾಸಕ ಶಿವರಾಜ ಎಸ್.ತಂಗಡಗಿ ಹೇಳಿದರು.
ತಾಲೂಕಿನ ಹಣವಾಳದಲ್ಲಿ ಹಡಪದ ಅಪ್ಪಣ್ಣ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಶೈಕ್ಷಣಿಕವಾಗಿ ಸಮುದಾಯ ಅಭಿವೃದ್ಧಿ ಹೊಂದಬೇಕಿದ್ದು, ಸಾಂಸ್ಕೃತಿಕ ಮತ್ತು ಸಮಾಜ ಸೇವಾ ಚಟುವಟಿಕೆಗಳಲ್ಲೂ ಮಂಚೂಣಿಯಲ್ಲಿರಬೇಕು. ಸಮುದಾಯ ಭವನ ಕ್ರಿಯಾಶೀಲ ಚಟುವಟಿಕೆಗಳ ಕೇಂದ್ರವಾಗಲಿ ಎಂದರು. ಇದೇ ಸಂದರ್ಭದಲ್ಲಿ ವನಮಹೋತ್ಸವದೊಂದಿಗೆ ವಿಶ್ವ ಪರಿಸರ ದಿನ ಆಚರಿಸಲಾಯಿತು.
ಜಿಪಂ ಮಾಜಿ ಸದಸ್ಯ ಅಮರೇಶ ಗೋನಾಳ್, ತಾಪಂ ಮಾಜಿ ಸದಸ್ಯ ಸಿದ್ದನಗೌಡ, ಕನಕಗಿರಿ ಪಪಂ ಸದಸ್ಯ ಹನುಮೇಶ, ಪ್ರಮುಖರಾದ ಅನ್ನಪ್ಪ, ನಿರುಪಾದಿ, ಬಸವರಾಜ, ಶರಣಪ್ಪ ದೇವರಮನಿ ಜಮಾಪುರ ಸೇರಿ ಗಂಗಾವತಿ, ಕನಕಗಿರಿ, ಗಂಗಾವತಿ ಮತ್ತು ಕಾರಟಗಿ ತಾಲೂಕಿನ ಪದಾಧಿಕಾರಿಗಳಿದ್ದರು.