ನಿಗದಿತ ಅವಧಿಯಲ್ಲಿ ಮಾಹಿತಿ ಸಂಗ್ರಹಿಸಿ

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಜನಗಣತಿಯ ಮೊದಲ ಹಂತದ ಸ್ವಯಂ ಗಣತಿಗೆ ಗಂಗಾವತಿ ನಗರಸಭೆಯಲ್ಲಿ ಆನ್‌ಲೈನ್ ಮೂಲಕ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಬುಧವಾರ ಚಾಲನೆ ನೀಡಿದರು. ಮೇಲ್ವಿಚಾರಕ ಮತ್ತು ವ್ಯವಸ್ಥಾಪಕ ಷಣ್ಮುಖಪ್ಪ, ಸಿಬ್ಬಂದಿ ಬಿ.ಬಸವರಾಜ, ಪ್ರಕಾಶ, ರಾಜು ಇತರರಿದ್ದರು.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಜನಗಣತಿಯ ಮೊದಲ ಹಂತದ ಸ್ವಯಂ ಗಣತಿಗೆ ಗಂಗಾವತಿ ನಗರಸಭೆಯಲ್ಲಿ ಆನ್‌ಲೈನ್ ಮೂಲಕ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಬುಧವಾರ ಚಾಲನೆ ನೀಡಿದರು. ಮೇಲ್ವಿಚಾರಕ ಮತ್ತು ವ್ಯವಸ್ಥಾಪಕ ಷಣ್ಮುಖಪ್ಪ, ಸಿಬ್ಬಂದಿ ಬಿ.ಬಸವರಾಜ, ಪ್ರಕಾಶ, ರಾಜು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಸೂಚನೆ
  • ಗಂಗಾವತಿ ನಗರಸಭೆ ಸ್ವಯಂಗಣತಿಗೆ ಚಾಲನೆ
ಗಂಗಾವತಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಜನಗಣತಿಯ ಮೊದಲ ಹಂತದ ಸ್ವಯಂಗಣತಿಗೆ ನಗರದ ನಗರಸಭೆಯಲ್ಲಿ ಆನ್‌ಲೈನ್ ನೋಂದಣಿ ಮೂಲಕ ಚಾಲನೆ ನೀಡಲಾಯಿತು.
ಮೊದಲ ಹಂತದಲ್ಲಿ ಮನೆಪಟ್ಟಿ ಮತ್ತು ಮನೆಗಣತಿ ಮಾಡಲಾಗುತ್ತಿದ್ದು, ಏ.1ರಿಂದ 15ರವರೆಗೆ ಮುಂದುವರಿಯಲಿದೆ. ಸರಳ, ಸುರಕ್ಷಿತ ಮತ್ತು ಡಿಜಿಟಲ್ ಮೂಲಕ ನೋಂದಣಿಗೆ ಅವಕಾಶ ಕಲ್ಪಿಸಲಾಗಿದ್ದು, ನಿಖರ ಮತ್ತು ವೇಗವಾದ ಮಾಹಿತಿಗಳ ಸಂಗ್ರಹಣೆಗೆ ಸ್ವಯಂ ಗಣತಿ ನೆರವಾಗಲಿದೆ.
ನೋಂದಣಿಗೆ ಚಾಲನೆ ನೀಡಿದ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಮಾತನಾಡಿ, ನಗರದ 35 ವಾರ್ಡ್‌ಗಳಲ್ಲಿ 157 ಬ್ಲಾಕ್‌ಗಳಿದ್ದು, 190 ಗಣತಿದಾರರನ್ನು ಈಗಾಗಲೇ ನಿಯೋಜಿಸಲಾಗಿದೆ. ಎರಡನೇ ಹಂತದ ಮನೆ ಗಣತಿಗಾಗಿ ಏ.3 ಮತ್ತು 5ರಂದು ವಿಶೇಷ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಸ್ವಯಂ ಗಣತಿಯಲ್ಲಿ ಮನೆ ಮಾಹಿತಿ ನೋಂದಣಿಯಾದರೆ ಜನಗಣತಿಗೆ ನೆರವಾಗಲಿದ್ದು, ಸಮಗ್ರ ಮಾಹಿತಿ ದೊರೆಯಲಿದೆ. ಸ್ವಯಂ ಗಣತಿಯಲ್ಲಿ ಲಭ್ಯವಾಗುವ ಎಸ್‌ಇ ಐಡಿ (ಸೆಲ್ಫ್ ಎನ್ಯುಮರೇಷನ್) ಇದ್ದರೆ ಜನಗಣತಿ ಸಂದರ್ಭದಲ್ಲಿ ಅನುಕೂಲವಾಗಲಿದೆ. ನಿಗದಿತ ಅವಧಿಯಲ್ಲಿ ಗಣತಿದಾರರ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ ಎಂದರು.
ಗಣತಿ ಮೇಲ್ವಿಚಾರಕ ಮತ್ತು ವ್ಯವಸ್ಥಾಪಕ ಷಣ್ಮುಖಪ್ಪ, ನೈರ್ಮಲ್ಯ ನಿರೀಕ್ಷಕಿ ಶೋಭಾ ಅಂಗಡಿ, ಸಿಬ್ಬಂದಿ ಬಿ.ಬಸವರಾಜ, ಪ್ರಕಾಶ, ರಾಜು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net