ನಶೆ ಮುಕ್ತ ಕರ್ನಾಟಕಕ್ಕಾಗಿ ಸಹಕರಿಸಿ

ಕಂಪ್ಲಿ ರಸ್ತೆಯ ಶ್ರೀ ವಿದ್ಯಾನಿಕೇತನ ಪಿಯು ಕಾಲೇಜಿನಲ್ಲಿ ನಗರ ಪೊಲೀಸ್ ಠಾಣೆಯಿಂದ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಾದಕ ವ್ಯಸನ ಮತ್ತು ಕಳ್ಳ ಸಾಗಣೆ ವಿರೋಧಿ ದಿನದಲ್ಲಿ ನಗರ ಪಿಐ ಪ್ರಕಾಶ ಆರ್. ಯಾತನೂರ್ ಮಾತನಾಡಿದರು. ಎಎಸೈ ಶಿವಶರಣಪ್ಪ, ಪ್ರಾಚಾರ್ಯ ಉಮಾಶಂಕರ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಪ್ರತಿಯೊಬ್ಬರೂ
  • ಪ್ರತಿಜ್ಞೆ
  • ಕೈಗೊಳ್ಳಬೇಕಿದ್ದು
ಗಂಗಾವತಿ: ಕಂಪ್ಲಿ ರಸ್ತೆಯ ಶ್ರೀ ವಿದ್ಯಾನಿಕೇತನ ಪಿಯು ಕಾಲೇಜಿನಲ್ಲಿ ನಗರ ಪೊಲೀಸ್ ಠಾಣೆಯಿಂದ ಅಂತಾರಾಷ್ಟ್ರೀಯ ಮಾದಕ ವ್ಯಸನ ಮತ್ತು ಕಳ್ಳ ಸಾಗಣೆ ವಿರೋಧಿ ದಿನ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ರಾಜ್ಯದಾದ್ಯಂತ ಏಕಕಾಲಕ್ಕೆ ನಡೆದ ಲೈವ್ ಕಾರ್ಯಕ್ರಮದ ನಿಮಿತ್ತ ನಗರ ಠಾಣೆ ಪಿಐ ಪ್ರಕಾಶ ಆರ್. ಯಾತನೂರ್ ಮಾತನಾಡಿ, ನಶೆ ಮುಕ್ತ ಕರ್ನಾಟಕಕ್ಕಾಗಿ ಪ್ರತಿಯೊಬ್ಬರೂ ಪ್ರತಿಜ್ಞೆ ಕೈಗೊಳ್ಳಬೇಕಿದ್ದು, ಅಕ್ಷರಶಃ ಅನುಷ್ಠಾನಕ್ಕೆ ತರಬೇತಿ ನೀಡಲಾಗುತ್ತಿದೆ.
ಮಾದಕ ದ್ರವ್ಯ ಒಬ್ಬ ವ್ಯಕ್ತಿಗೆ ಮಾತ್ರ ಹಾನಿ ಮಾಡಲ್ಲ, ಕುಟುಂಬ ಮತ್ತು ಸ್ನೇಹಿತರು ಸೇರಿ ಇಡೀ ಭವಿಷ್ಯವನ್ನು ಸದ್ದಿಲ್ಲದೇ ನಾಶ ಮಾಡಲಿದೆ ಎಂದರು. ಎಎಸೈ ಶಿವಶರಣಪ್ಪ, ಪ್ರಾಚಾರ್ಯ ಉಮಾಶಂಕರ ಇತರರಿದ್ದರು. ಬಸ್ ನಿಲ್ದಾಣದಲ್ಲ್ಲಿ ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮ ಬಗ್ಗೆ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಹೊಸಳ್ಳಿ ರಸ್ತೆ ಆರೋನ್ ಮಿರಜ್ಕರ್ ಶಾಲೆಯಲ್ಲಿ ಹಮ್ಮಿಕೊಂಡ ಜಾಗೃತಿ ಅಭಿಯಾನದಲ್ಲಿ ಪಿಎಸೈ ಟಿ.ಜಿ.ನಾಗರಾಜ ಮಾತನಾಡಿದರು. ಎಎಸೈಗಳಾದ ಸುಬ್ರಮಣ್ಯಗೌಳಿ, ಶೇಖರಯ್ಯ, ಶಾಲಾಡಳಿತ ಮಂಡಳಿ ಕಾರ್ಯದರ್ಶಿ ರುಬೀನ್ ಮಿರಜಕರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net