ಅವಳಿ ತಾಲೂಕಿನಲ್ಲಿ ತೋಟಗಾರಿಕೆ ಬೆಳೆಗಳಾದ ಮಾವು, ಪೇರಲ, ದಾಳಿಂಬೆ ಹಾಗೂ ತರಕಾರಿಗಳಾದ ಮೆಣಸಿನಕಾಯಿ, ಬದನೆಕಾಯಿ, ಚವಳಿಕಾಯಿ, ಬೆಂಡೆಕಾಯಿ, ಟೊಮ್ಯಾಟೊ ಇತರ ಬೆಳೆ ಅಧಿಕವಾಗಿ ಬೆಳೆಯಲಾಗುತ್ತಿದೆ. ಬೆಲೆ ಇಲ್ಲದಿದ್ದಾಗ ಇವುಗಳನ್ನು ಸಂಸ್ಕರಿಸಲು ಕೋಲ್ಡ್ ಸ್ಟೋರೇಜ್ ತುಂಬಾ ಅವಶ್ಯವಾಗಿದೆ. ಶೀಘ್ರವೇ ಮಾರ್ಗಸೂಚಿ ತರಿಸಿ ರೈತರ ಬೆಳೆಗಳ ಸಂಸ್ಕರಣೆಗೆ ಕೋಲ್ಡ್ ಸ್ಟೋರೇಜ್ ಮುಕ್ತಗೊಳಿಸಬೇಕೆಂಬುದು ಕೃಷಿಕರ ಒತ್ತಾಸೆಯಾಗಿದೆ.