ಸಿಎಂ ಕಾರ್ಖಾನೆ ಸಮಸ್ಯೆ ಪರಿಹರಿಸಲಿ

ಕೊಪ್ಪಳದಲ್ಲಿ ಕಾರ್ಖಾನೆಗಳ ವಿಸ್ತರಣೆ ಖಂಡಿಸಿ ಹಮ್ಮಿಕೊಂಡಿರುವ ಧರಣಿಯಲ್ಲಿ ಮಂಗಳವಾರ ಸಾಹಿತಿ ಕೆ.ಎಸ್​.ಭಗವಾನ್​ ಮಾತನಾಡಿದರು. ಹೋರಾಟಗಾರರಾದ ಅಲ್ಲಮಪ್ರಭು ಬೆಟ್ಟದೂರು, ಮಲ್ಲಿಕಾರ್ಜುನ ಗೋನಾಳ, ಮಂಜುನಾಥ ಗೊಂಡಬಾಳ, ಡಿ.ಎಂ.ಬಡಿಗೇರ, ಎಚ್​.ಎಸ್​. ಪಾಟೀಲ್​, ಎ. ಎಂ. ಮದರಿ, ನಜೀರಸಾಬ್​ ಮೂಲಿಮನಿ, ಭೀಮಸೇನ ಕಲಕೇರಿ, ಜ್ಯೋತಿ ಎಂ. ಗೊಂಡಬಾಳ, ಸಾವಿತ್ರಿ ಮುಜುಮದಾರ ಇದ್ದರು.
ಕೊಪ್ಪಳದಲ್ಲಿ ಕಾರ್ಖಾನೆಗಳ ವಿಸ್ತರಣೆ ಖಂಡಿಸಿ ಹಮ್ಮಿಕೊಂಡಿರುವ ಧರಣಿಯಲ್ಲಿ ಮಂಗಳವಾರ ಸಾಹಿತಿ ಕೆ.ಎಸ್​.ಭಗವಾನ್​ ಮಾತನಾಡಿದರು. ಹೋರಾಟಗಾರರಾದ ಅಲ್ಲಮಪ್ರಭು ಬೆಟ್ಟದೂರು, ಮಲ್ಲಿಕಾರ್ಜುನ ಗೋನಾಳ, ಮಂಜುನಾಥ ಗೊಂಡಬಾಳ, ಡಿ.ಎಂ.ಬಡಿಗೇರ, ಎಚ್​.ಎಸ್​. ಪಾಟೀಲ್​, ಎ. ಎಂ. ಮದರಿ, ನಜೀರಸಾಬ್​ ಮೂಲಿಮನಿ, ಭೀಮಸೇನ ಕಲಕೇರಿ, ಜ್ಯೋತಿ ಎಂ. ಗೊಂಡಬಾಳ, ಸಾವಿತ್ರಿ ಮುಜುಮದಾರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಹಿತಿ ಕೆ.ಎಸ್​.ಭಗವಾನ್​ ಆಗ್ರಹ
  • ಬಾಧಿತ ಗ್ರಾಮಗಳಿಗೆ ಭೇಟಿ
ಕೊಪ್ಪಳ: ಸಿಎಂ ಸಿದ್ದರಾಮಯ್ಯ ಜನಪರವಾಗಿದ್ದಾರೆ. ಕೊಪ್ಪಳ ಭಾಗದಲ್ಲಿ ಕಾರ್ಖಾನೆಗಳಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಗಮನ ಸೆಳೆಯುವೆ ಎಂದು ಸಾಹಿತಿ ಕೆ.ಎಸ್​.ಭಗವಾನ್​ ಹೇಳಿದರು.
ನಗರಸಭೆ ಮುಂಭಾಗದಲ್ಲಿ ಜಂಟಿ ಕ್ರಿಯಾ ಸಮಿತಿಯಿಂದ ಬಿಎಸ್​ಪಿಎಲ್​, ಕಿರ್ಲೊಸ್ಕರ್​ ಸೇರಿ ಇನ್ನಿತರ ಕಾರ್ಖಾನೆಗಳ ವಿಸ್ತರಣೆ ಖಂಡಿಸಿ ಹಮ್ಮಿಕೊಂಡಿರುವ 75ನೇ ದಿನದ ಧರಣಿಯಲ್ಲಿ ಭಾಗಿಯಾಗಿ ಮಾತನಾಡಿದರು.
ಒಮ್ಮೆ ಸಿಎಂ ಈ ಗ್ರಾಮಗಳಿಗೆ ಬರುವಂತೆ ಆಹ್ವಾನಿಸುವೆ. ಸದ್ಯ ಇರುವ ಕಾರ್ಖಾನೆಗಳಿಂದ ಆಗಿರುವ ಸಂಕಷ್ಟ ತಡೆದುಕೊಳ್ಳಲು ಆಗುತ್ತಿಲ್ಲ. ಇನ್ನು ಹೊಸದಾಗಿ ಕಾರ್ಖಾನೆಗಳು ಬಂದಲ್ಲಿ ಮತ್ತಷ್ಟು ಪರಿಸ್ಥಿತಿ ಬಿಗಡಾಯಿಸಲಿದೆ. ಇಲ್ಲಿನ ಸಮಸ್ಯೆಗಳು ಬೆಂಗಳೂರು ತಲುಪುವುದಿಲ್ಲ. ವಿಧಾನಸೌಧಕ್ಕೆ ಹೋರಾಟ ತಲುಪಿಸೋಣ. ನಿಯೋಗ ಕೊಂಡೊಯ್ಯೋಣ ಎಂದು ಸಲಹೆ ನೀಡಿದರು.
ಕೃಷಿ ಬೆಲೆ ಆಯೋಗ ಸದಸ್ಯ ಡಿ.ಎಚ್​.ಪೂಜಾರ ಮಾತನಾಡಿ, ಮೂರು ತಿಂಗಳಿಂದ ಹೋರಾಟ ನಡೆಯುತ್ತಿದೆ. ಶಾಸಕ ಹಿಟ್ನಾಳ ಸೌಜನ್ಯಕ್ಕೂ ಭೇಟಿ ನೀಡಿಲ್ಲ. ಕ್ಷೇತ್ರದ ಜನರ ಜೀವನ, ಉಸಿರು, ಬದುಕು ಮತ್ತು ಕೃಷಿ ಮುಖ್ಯ ಎಂದು ಸರ್ಕಾರಕ್ಕೆ ಮನವಕರಿಕೆ ಮಾಡಬೇಕು. ಅದು ಬಿಟ್ಟು ಪಲಾಯನವಾದ ಮಾಡಬಾರದು ಎಂದು ಟೀಕಿಸಿದರು.
ವಕೀಲ ರಾಜು ಬಾಕಳೆ ಮಾತನಾಡಿ, ಜನ ಸಂಗ್ರಾಮದ ಮೂಲಕ ಹೋರಾಟ ನಡೆಸಿದ್ದೇವೆ. ಗೆಲ್ಲುವ ವಿಶ್ವಾಸವಿದೆ. ಗವಿಶ್ರೀಗಳ ಆಶೀರ್ವಾದ ಇದೆ. ಸಂಸದರು ನಮ್ಮ ಪರವಾಗಿ ಮಾತನಾಡಿದ್ದಾರೆಂದರು.
ರೈತ ಮಹಿಳೆ ಗಿರಿಯಮ್ಮ ಕುಣಿಕೇರಿ, ಕೃಷಿಕ ಮಾರ್ಕಂಡೇಯ ಹಿರೇಮಠ ಅನಿಸಿಕೆ ಹಂಚಿಕೊಂಡರು. ದದೇಗಲ್​ ಸದ್ಗುರು ಸಿದ್ಧಾರೂಢ ಮಠದ ಶ್ರೀ ಆತ್ಮಾನಂದ ಸ್ವಾಮೀಜಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮಕ್ಕು ಮುನ್ನ ವಿವಿಧ ಗ್ರಾಮಗಳಿಗೆ ಭಗವಾನ್​ ಭೇಟಿ ನೀಡಿ ಜನರೊಂದಿಗೆ ಸಂವಾದ ಮಾಡಿದರು.
ಹೋರಾಟಗಾರರಾದ ಅಲ್ಲಮಪ್ರಭು ಬೆಟ್ಟದೂರು, ಮಲ್ಲಿಕಾರ್ಜುನ ಗೋನಾಳ, ಮಂಜುನಾಥ ಗೊಂಡಬಾಳ, ಡಿ.ಎಂ.ಬಡಿಗೇರ, ಎಚ್​.ಎಸ್​. ಪಾಟೀಲ್​, ಎ. ಎಂ. ಮದರಿ, ನಜೀರಸಾಬ್​ ಮೂಲಿಮನಿ, ಭೀಮಸೇನ ಕಲಕೇರಿ, ಜ್ಯೋತಿ ಎಂ. ಗೊಂಡಬಾಳ, ಸಾವಿತ್ರಿ ಮುಜುಮದಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net