ಹಣವಾಳ ಗ್ರಾಮದ ರಾಜು ಮೊಬೈಲ್ ಟವರ್ ಏರಿ ರಾದ್ಧಾಂತ ಸೃಷ್ಟಿಸಿದ್ದು, ಕೆಳಗಿಳಿಸಲು ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟರು. ರಾಯಚೂರು ಜಿಲ್ಲೆ ದೇವದುರ್ಗ ಮೂಲದ ಯುವತಿಯನ್ನು ರಾಜು ಪ್ರೀತಿಸಿದ್ದಾನೆ. ಆದರೆ, ಯುವತಿ ಈತನ್ನೊಂದಿಗೆ ಬರಲು ನಿರಾಕರಿಸಿದ್ದಳು. ಹೀಗಾಗಿ ಭಾನುವಾರ ದೇವದುರ್ಗಕ್ಕೆ ಹೋಗಿ ಟವರ್ ಏರಿ ರಾದ್ಧಾಂತ ಮಾಡಿದ್ದ. ಪೊಲೀಸರು ಯುವತಿಯನ್ನು ಕರೆಸಿ ಮಾತನಾಡಿಸಿದ ನಂತರ ಕೆಳಗಿಳಿದಿದ್ದ. ಪೊಲೀಸ್ ವಿಚಾರಣೆ ನಂತರ ರಾಜುನನ್ನು ಬಿಡಲಾಗಿತ್ತು. ಸೋಮವಾರ ಹಣವಾಳಗೆ ವಾಪಾಸ್ಸಾದ ರಾಜು ನಗರದಲ್ಲಿ ಟವರ್ ಏರಿ ಯುವತಿಯೊಂದಿಗೆ ಮಾತನಾಡಿಸಬೇಕೆಂದು ಒತ್ತಾಯಿಸಿದ್ದಾನೆ. ಆದರೆ, ಯುವತಿ ಮೊಬೈಲ್ ಸ್ವಿಚ್ ಆ್ ಆಗಿದೆ. ಸ್ಥಳಕ್ಕೆ ಯುವಕನ ತಾಯಿ ನಿಂಗಮ್ಮ, ಸಹೋದರ ಹನುಮಂತಪ್ಪನನ್ನು ಕರೆಸಿದರೂ ಕೆಳಗಿಳಿಯದೆ ಮಿನಿಸ್ಟರ್, ಎಂಎಲ್‌ಎ, ಎಸ್ಪಿ ಬಂದು ಭರವಸೆ ನೀಡಿದರೆ ಮಾತ್ರ ಕೆಳಗಿಳಿಯುತ್ತೇನೆ ಎಂದು ಹುಚ್ಚಾಟ ಪ್ರದರ್ಶಿಸಿದ್ದಾನೆ.ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆ ಬಳಿಕ ನಗರ ಪಿಐ ಪ್ರಕಾಶ ಆರ್. ಯಾತ್ನಾಳ್,‘ನೀನು ಕೆಳಗಿಳಿದ್ರೇ ನೀ ಹೇಳಿದಂಗೆ ಕೇಳ್ತೀವೀ’ ಎಂದು ಮನವೊಲಿಸಿ ಕೆಳಗಿಳಿಸಿದರು. ನಗರ ಠಾಣೆಯಲ್ಲಿ ಯುವಕನ್ನು ವಿಚಾರಣೆಗೊಳಪಡಿಸಿದ್ದು, ಕುಟುಂಬ ಸದಸ್ಯರ ಹೇಳಿಕೆ ಪಡೆಯಲಾಗಿದೆ.ನಂತರ ನಗರ ಪಿಐ ಪ್ರಕಾಶ ಆರ್.ಯಾತನೂರು ನೇತೃತ್ವದ ಪೊಲೀಸರು ಮನವೊಲಿಸಿ ಇಳಿಸಿ ವಿಚಾರಣೆ ನಡೆಸಿದರು.