ಸಚಿವರು ಹಾಗೂ ಸಾರ್ವಜನಿಕರ ನಿರ್ಣಯದಂತೆ ಮೇ 14, 15ರಂದು ಕ್ರೀಡಾಕೂಟ ಹಾಗೂ 16, 17ರಂದು ಉತ್ಸವದ ಕಾರ್ಯಕ್ರಮ ನಡೆಯಬೇಕಿತ್ತು. ಇದಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 6 ಕೋಟಿ ರೂ. ಮಂಜೂರಾಗಿದ್ದು, ಒಂದು ವಾರದಿಂದ ಸಿದ್ಧತೆ ಕೈಗೊಳ್ಳಲಾಗಿತ್ತು. ಎಲ್ಲೆಡೆ ಸ್ವಚ್ಛತೆ ಮಾಡಲಾಗಿತ್ತು. ಹೆಲಿಪ್ಯಾಡ್‌ಗಳ ನಿರ್ಮಾಣ ಆರಂಭವಾಗಿದ್ದು, ಜನರ ಆಸೆಯಂತೆ ಮೈಸೂರು ದಸರಾ ಮಾದರಿಯಲ್ಲಿ ರಾಜಬೀದಿ ಹಾಗೂ ಗಂಗಾವತಿ-ಮುದ್ಗಲ್ ರಾಜ್ಯ ಹೆದ್ದಾರಿಯಲ್ಲಿ ವಿದ್ಯುತ್ ದೀಪಗಳ ಅಲಂಕಾರ ಸಹ ಮಾಡಲಾಗಿತ್ತು. ಕೆಲ ಕಚೇರಿಗಳಲ್ಲಿ ಸುಣ್ಣ, ಬಣ್ಣ ಬಳಿಯುವ ಕೆಲಸ ನಡೆದಿತ್ತು. ವಿವಿಧ ಇಲಾಖೆ ಅಧಿಕಾರಿಗಳು ತಮಗೆ ವಹಿಸಿದ್ದ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದರು.