ಬೇಸಿಗೆಯ ತಾಪದಿಂದ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ನೆರಳು ಒದಗಿಸುವ ಉದ್ದೇಶದಿಂದ ಅಳವಡಿಸಲಾಗಿದ್ದ ಹಸಿರು ಹೊದಿಕೆಯ ಒಂದು ಭಾಗ ಕಳೆದ ಹಲವು ದಿನಗಳಿಂದ ಕಿತ್ತುಹೋಗಿ ರಸ್ತೆಯ ಮೇಲ್ಭಾಗದಲ್ಲಿ ನೇತಾಡುತ್ತಿತ್ತು. ಗಾಳಿಯ ವೇಗಕ್ಕೆ ಅನುಗುಣವಾಗಿ ಅತ್ತಿತ್ತ ತೂರಾಡುತ್ತಿದ್ದ ಕಾರಣ ವಾಹನ ಸವಾರರಲ್ಲಿ ಆತಂಕ ಮೂಡಿತ್ತು. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರಿಗೆ ಅಪಘಾತ ಸಂಭವಿಸುವ ಭೀತಿ ಉಂಟಾಗಿತ್ತು.