ಸಭೆಯಲ್ಲಿ ಇರಕಲ್ ಗಡಾ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ, ಜೂಜಾಟ ವಿರುದ್ಧ ಕ್ರಮಕ್ಕೆ ಅಬಕಾರಿ, ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು. ಉತ್ತರಿಸಿದ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದು ನಿಯಂತ್ರಣ ಮಾಡಿದ ಬಗ್ಗೆ ಸಮರ್ಥಿಸಿಕೊಂಡರು. ಸಭೆಗೆ ಆ ಭಾಗದ ಜನರನ್ನು ಆಹ್ವಾನಿಸಿದ್ದ ರೆಡ್ಡಿ, ಅವರಿಂದಲೇ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಡಿಸಿ ಅಧಿಕಾರಿಗಳನ್ನು ಮೌನವಾಗಿಸಿದರು. ಬುಡಶೆಟ್ನಾಳ ಗ್ರಾಮದಲ್ಲಿ ನೀರಾವರಿ ಇಲಾಖೆ ಜಾಗದಲ್ಲಿ ಅಕ್ರಮ ಮರಂ ಗಣಿಗಾರಿಕೆ ನಡೆಯುತ್ತಿದ್ದು, ಅಧಿಕಾರಿಗಳು ಕ್ರಮ ಜರುಗಿಸುತ್ತಿಲ್ಲವೆಂದು ಗ್ರಾಮಸ್ಥರು ದೂರಿದರು. ತಕ್ಷಣ ಅರಣ್ಯ, ಕಂದಾಯ, ಸಣ್ಣ ನೀರಾವರಿ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮ ಎಸಗುವವರೂ ಯಾರೇ ಆಗಿದ್ದರೂ ಮುಲಾಜಿಲ್ಲದೆ ಕ್ರಮ ಜರುಗಿಸಿ ಎಂದು ರೆಡ್ಡಿ ತಾಕೀತು ಮಾಡಿದರು.