ಕ್ಷೇತ್ರದ ಸ್ವಚ್ಚತೆಗಾಗಿ ದೇವಸ್ಥಾನದಿಂದ ಹೆಚ್ಚುವರಿಯಾಗಿ 50 ಜನ ಸ್ವಚ್ಛತಾ ಸಿಬ್ಬಂದಿಗಳನ್ನು ತೆಗೆದುಕೊಳ್ಳಬೇಕು. ದೇವಸ್ಥಾನಸ ಆವರಣ, ಮುದ್ದಮ್ಮನ ಕಟ್ಟೆ, ನಂದಿ ಸರ್ಕಲ್, ನದಿ ತೀರದ ಹತ್ತಿರ ಹೀಗೆ ಹುಲಿಗಿಯ ಎಲ್ಲಾ ಏರಿಯಾಗಳನ್ನು ಹಂಚಿಕೆ ಮಾಡಿ. ಅವುಗಳ ಸ್ವಚ್ಛತೆಯ ಸಂಪೂರ್ಣ ಜವಾಬ್ದಾರಿಯನ್ನು ಪ್ರತಿಯೊಂದು ತಂಡಕ್ಕೆ ನೀಡಿ, ಹಸಿಕಸ ಮತ್ತು ಒಣಕಸವನ್ನು ಹೊಸಹಳ್ಳಿ ಕಸವಿಲೇವಾರಿ ಘಟಕಕ್ಕೆ ಕಳುಹಿಸಬೇಕು. ಯಾವುದೇ ರೀತಿಯ ರೋಗಗಳು ಬರದಂತೆ ಮುಂಜಾಗ್ರತೆ ವಹಿಸಿ. ಬ್ಲೀಚಿಂಗ ಪೌಡರ್, ಫಿನಾಯಿಲ್ಗಳನ್ನು ಸಿಂಪಡಿಸಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ಕೊಡಿ. ಜಾತ್ರೆಯ ನಂತರ ಹುಲಿಗಿ ಗ್ರಾಮದ ಪ್ರಮುಖ ರಸ್ತೆಗಳು, ಶಾಲೆಗಳು, ಬಸ್ ನಿಲ್ದಾಣ ಮುಂತಾದ ಕಡೆ ಸ್ವಚ್ಚತೆಗೂ ಅಗತ್ಯ ಕ್ರಮ ಕೈಗೊಳ್ಳಲು ಕೊಪ್ಪಳ ನಗರಸಭೆಯಿಂದ ಸಕ್ಕಿಂಗ್ ಮಷಿನ್-1 ನ್ನು ಸ್ವಚ್ಛತೆ ಮಾಡಲು ಪಡೆತಲು ಸೂಚಿಸಿದರು.