ವಕೀಲರು-ಕಕ್ಷಿದಾರರಿಗೆ ಅನುಕೂಲ

ಗಂಗಾವತಿ ತಾಲೂಕಿಗೆ ಮಂಜೂರಾದ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯಕ್ಕೆ ಜೆಎಂಎಫ್‌ಸಿ ಕಟ್ಟಡದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ. ಚಂದ್ರಶೇಖರ್ ಸೋಮವಾರ ಚಾಲನೆ ನೀಡಿದರು. ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ. ಎಸ್. ವೇದಮೂರ್ತಿ, ವಕೀಲರ ಸಂಘದ ತಾಲೂಕಾಧ್ಯಕ್ಷ ಶರಣಬಸಪ್ಪ ನಾಯಕ, ಕಾರ್ಯದರ್ಶಿ ಎಚ್.ಎಂ. ಮಂಜುನಾಥ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ನ್ಯಾಯಾಧೀಶ ಸಿ. ಚಂದ್ರಶೇಖರ್ ಹೇಳಿಕೆ
  • ಗಂಗಾವತಿಯಲ್ಲಿ ಸಿವಿಲ್ ಕೋರ್ಟ್ ಉದ್ಘಾಟನೆ
ಗಂಗಾವತಿ: ತಾಲೂಕಿನಲ್ಲಿ 11 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವಿಲೇವಾರಿಯಾಗದೇ ಉಳಿದಿದ್ದು, ಈ ಹೆಚ್ಚುವರಿ ನ್ಯಾಯಾಲಯ ಆರಂಭದಿಂದ ವಕೀಲರು ಮತ್ತು ಕಕ್ಷಿದಾರರಿಗೆ ಅನುಕೂಲವಾಗಲಿದೆ. ಜೆಎಂಎಫ್‌ಸಿಯಲ್ಲಿ ಸದ್ಯ ಐವರು ನ್ಯಾಯಾಧೀಶರಿದ್ದು, ವಕೀಲರ ಸಂಘದ ಬೇಡಿಕೆಗಳನ್ನು ಹೈಕೋರ್ಟ್ ಗಮನಕ್ಕೆ ತಂದು ಈಡೇರಿಸಲು ಯತ್ನಿಸಲಾಗುವುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ. ಚಂದ್ರಶೇಖರ್ ಹೇಳಿದರು.
ತಾಲೂಕಿಗೆ ಮಂಜೂರಾದ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯಕ್ಕೆ ನಗರದ ಜೆಎಂಎಫ್‌ಸಿ ಕಟ್ಟಡದಲ್ಲಿ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಎಚ್. ಎಂ. ಮಂಜುನಾಥ ಮಾತನಾಡಿ, ಹಳೇ ಕೋರ್ಟ್ ನವೀಕರಣ, ವಕೀಲರ ಭವನ ನಿರ್ಮಾಣ, ಎರಡನೇ ಹೆಚ್ಚುವರಿ ಹಿರಿಯ ಶ್ರೇಣಿ ನ್ಯಾಯಾಲಯ ಸ್ಥಾಪನೆ ಹಾಗೂ ಕಾರಟಗಿ ನ್ಯಾಯಾಲಯಕ್ಕೆ ಶಾಶ್ವತ ನ್ಯಾಯಾಧೀಶರ ನೇಮಕವಾಗಬೇಕಿದೆ ಎಂದು ಬೇಡಿಕೆಗಳನ್ನಿಟ್ಟರು. ಇದೇ ಸಂದರ್ಭದಲ್ಲಿ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆಯಾಗಿ ನಿಯೋಜನೆಗೊಂಡ ರೋಷನಿ ಪಾಟೀಲ್ ಅವರನ್ನು ಸ್ವಾಗತಿಸಲಾಯಿತು.
ಕಾರ್ಯಕ್ರಮದಲ್ಲಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಎಸ್. ವೇದಮೂರ್ತಿ, ಹಿರಿಯ ಶ್ರೇಣಿ ನ್ಯಾಯಾಧೀಶ ಜಿ.ಬಿ. ಹಳ್ಳಕಾಯಿ, ಪ್ರಧಾನ ಸಿವಿಲ್ ನ್ಯಾಯಾಧೀಶ ನಾಗೇಶ ಪಾಟೀಲ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಮೇಘಾ ಸೋಮಣ್ಣನವರ್, ಪಿಡಬ್ಲುೃಡಿ ಇಇ ಹೇಮಂತ್ ರಾಜ್, ವಕೀಲರ ಸಂಘದ ತಾಲೂಕಾಧ್ಯಕ್ಷ ಶರಣಬಸಪ್ಪ ನಾಯಕ, ಪದಾಧಿಕಾರಿಗಳಾದ ಪ್ರಕಾಶ ಕುಸುಬಿ, ಪುಷ್ಪಾ ಶ್ರೀನಿವಾಸ್, ಅಪರ ಸರ್ಕಾರಿ ವಕೀಲೆ ಸೈಯದ್ ಬಾನು ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net