ಕಾರ್ಮಿಕ ಸಂಹಿತೆ ಜಾರಿ ಖಂಡಿಸಿ ಸಿಐಟಿಯು ಪದಾಧಿಕಾರಿಗಳು ಗುರುವಾರ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ಮುಖಂಡರಾದ ಹನುಮೇಶ ಕಲ್ಮಂಗಿ, ಕಾಸಿಂ ಸರ್ದಾರ, ಕಂಠಿ ಬಸವರಾಜ, ರವಿ ಜೋಶಿ, ರಾಮಕೃಷ್ಣ, ಅಮರೇಶ, ನಾಗೇಶ ಮೋರೆ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಿಐಟಿಯು ಪದಾಧಿಕಾರಿಗಳಿಂದ ಆರೋಪ
ಕೊಪ್ಪಳ : ನೂತನ ನಾಲ್ಕು ಕಾರ್ಮಿಕ ಸಂಹಿತೆಗಳು ದುಡಿವ ವರ್ಗದ ವಿರುದ್ಧ ಕೇಂದ್ರ ಸರ್ಕಾರ ಮಾಡಿದ ವಂಚನೆ ಎಂದು ಆರೋಪಿಸಿ ಸಿಐಟಿಯು ಪದಾಧಿಕಾರಿಗಳು ಗುರುವಾರ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ 2025ರ ನವೆಂಬರ್ 21ರಂದು ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಅನುಷ್ಠಾನಕ್ಕೆ ತರುವ ನಿರ್ಧಾರ ಮಾಡಿತು. ನಿಯಮಾವಳಿ ರೂಪಿಸಲು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಲಾಗುತ್ತಿದೆ. ಕರಡು ನಿಯಮಾವಳಿಗಳಿಗೆ ಕಾರ್ಮಿಕ ಸಂಟನೆಗಳು, ಸಿಐಟಿಯು ಸಲ್ಲಿಸಿದ ಆಕ್ಷೇಪಣೆಗಳನ್ನು ಪರಿಗಣಿಸಿಲ್ಲ. ನಿರಂತರ ಪ್ರತಿಭಟನೆ ನಡೆಸಿದ್ದು, ದುಡಿವ ಜನರ ಅಭಿಪ್ರಾಯ ತಿರಸ್ಕರಿಸಲಾಗಿದೆ. ವಿದೇಶಿ ಹಾಗೂ ಸ್ವದೇಶಿ ಕಾರ್ಪೊರೇಟ್ ಬಂಡವಾಳಿಗರ ಅನುಕೂಲಕ್ಕಾಗಿ ಸಂಹಿತೆಗಳನ್ನು ಜಾರಿಗೆ ತರಲಾಗಿದೆ ಎಂದು ಆರೋಪಿಸಿದರು.
ಇದೊಂದು ದೇಶದ್ರೋಹಿ ಕೆಲಸ. ಕಾರ್ಮಿಕರ ಮೂಲಭೂತ ಹಕ್ಕು ಮೊಟಕುಗೊಳಿಸಕೂಡದು. ಬಂಡವಾಳಗಾರರು ಸೂಚಿಸುವ ಅಂಶಗಳನ್ನು ಕಾನೂನು ಮಾಡುತ್ತಿದ್ದು, ದೇಶದ ಯುವ ಪೀಳಿಗೆಗೆ ಕಾಯಂ ಉದ್ಯೋಗವಕಾಶ ಇಲ್ಲದಂತೆ ಮಾಡಲಾಗುತ್ತಿದೆ. ಸಿಐಟಿಯು ಇದನ್ನು ಬಲವಾಗಿ ಖಂಡಿಸಲಿದೆ. ಕರ್ನಾಟಕ ರಾಜ್ಯ ಸರ್ಕಾರ ಸಂಹಿತೆಗಳನ್ನು ರಾಜ್ಯದಲ್ಲಿ ಜಾರಿ ಮಾಡಕೂಡದು. ಶ್ರಮ ಜೀವಿಗಳನ್ನು ರಸಬೇಕು ಎಂದು ಒತ್ತಾಯಿಸಿದರು.