ಕೊಪ್ಪಳ:ಕೇಂದ್ರದ ಕಾರ್ಮಿಕ ಸಂಹಿತೆ ಖಂಡಿಸಿ ಸಿಐಟಿಯು ಜಿಲ್ಲಾ ಪದಾಧಿಕಾರಿಗಳು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಇಂದಿನಿಂದ ನಾಲ್ಕು ಕಾರ್ಮಿಕ ವಿರೋಧಿ ಸಂಹಿತೆ ಜಾರಿಗೊಳಿಸುತ್ತಿದೆ. ಕಾರ್ಮಿಕರ ಪಾಲಿಗೆ ಇದು ಕರಾಳ ದಿನ. ಈ ಹಿನ್ನೆಲೆಯಲ್ಲಿ ದೇಶ, ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ನಾವು ಕೈಗೆ ಕಪು$್ಪಪಟ್ಟಿ ಕಲ್ಲಿ ವಿರೋಧಿಸುತ್ತಿದ್ದೇವೆ. ಕೇಂದ್ರದ ಸರ್ವಾಧಿಕಾರಿ ನೀತಿ, ಕಾರ್ಮಿಕ ವಿರೋಧಿ ನಡೆ, ಕಾರ್ಮಿಕರ ಅಭಿಪ್ರಾಯಕ್ಕೆ ಮನ್ನಣೆ ನೀಡದಿರುವುದಕ್ಕೆ ಖಂಡನೆ ವ್ಯಕ್ತಪಡಿಸಿದರು.