ಕೊಪ್ಪಳದಲ್ಲಿ ಸಂಭ್ರಮದ ಕ್ರಿಸ್​ಮಸ್​

ಕೊಪ್ಪಳದ ಸಂತ ಫ್ರಾನ್ಸಿಸ್​ ಡಿ ಸೇಲ್ಸ್​ ಚರ್ಚ್​ನಲ್ಲಿ ಗುರುವಾರ ಕ್ರಿಸ್​ಮಸ್​ ಆಚರಣೆಯಲ್ಲಿ ಶಾಸಕ ರಾವೇಂದ್ರ ಹಿಟ್ನಾಳ ಭಾಗಿಯಾದರು. ಪಾಧರ್​ ಜೆ.ರವಿಕುಮಾರ್​,  ವಕೀಲರ ಸಂದ ಜಿಲ್ಲಾಧ್ಯಕ್ಷ ಎ.ವಿ.ಕಣವಿ, ವಿರುಪಣ್ಣ ನವೋದಯ ಇದ್ದರು.
ಕೊಪ್ಪಳದ ಸಂತ ಫ್ರಾನ್ಸಿಸ್​ ಡಿ ಸೇಲ್ಸ್​ ಚರ್ಚ್​ನಲ್ಲಿ ಗುರುವಾರ ಕ್ರಿಸ್​ಮಸ್​ ಆಚರಣೆಯಲ್ಲಿ ಶಾಸಕ ರಾವೇಂದ್ರ ಹಿಟ್ನಾಳ ಭಾಗಿಯಾದರು. ಪಾಧರ್​ ಜೆ.ರವಿಕುಮಾರ್​, ವಕೀಲರ ಸಂದ ಜಿಲ್ಲಾಧ್ಯಕ್ಷ ಎ.ವಿ.ಕಣವಿ, ವಿರುಪಣ್ಣ ನವೋದಯ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ರಾಘವೇಂದ್ರ ಹಿಟ್ನಾಳ ಸೇರಿ ಇತರರು ಭಾಗಿ
ಕೊಪ್ಪಳ: ಕ್ರಿಶ್ಚಿಯನ್ನರ ಪವಿತ್ರ ಹಬ್ಬವಾದ ಕ್ರಿಸ್​ಮಸ್​ ಗುರುವಾರ ನಗರಾದ್ಯಂತ ಸಡಗರ&ಸಂಭ್ರಮದಿಂದ ಆಚರಿಸಿದ್ದು ಕಂಡುಬಂತು. ಶಾಸಕ ರಾಘವೇಂದ್ರ ಹಿಟ್ನಾಳ ಸೇರಿ ಇತರ ಗಣ್ಯರು ನಗರದ ಚರ್ಚ್​ಗಳಿಗೆ ಭೇಟಿ ನೀಡಿ ಶುಭಕೋರಿ ಹಬ್ಬ ಆಚರಿಸಿದರು.
ನಂತರ ಮಾತನಾಡಿ, ಯೇಸುಕ್ರಿಸ್ತ ಅವರ ಬೋಧನೆ ನಮಗೆಲ್ಲ ದಾರಿ ದೀಪ. ಸನ್ಮಾರ್ಗದಲ್ಲಿ ನಡೆಯೋಣ. ಯೇಸು ಸಾಮಾನ್ಯ ಹಟ್ಟಿಯಲ್ಲಿ ಹುಟ್ಟಿ ಅಸಾಮಾನ್ಯವಾಗಿ ಬೆಳದರು. ತನ್ನನ್ನೇ ಉರಿಸಿಕೊಂಡು ಜಗತ್ತಿಗೆ ಬೆಳಕು ನೀಡಿದರು. ದೇವ ಮಾನವರಾದರು. ಬೈಬಲ್​ ಕೇವಲ ಕೆಸ್ತರಿಗಷ್ಟೇ ಅಲ್ಲ ಎಲ್ಲರಿಗೂ ಸದ್ಭಾವನಾ ಗ್ರಂಥ ಎಂದರು.
ಸಂತ ಫ್ರಾನ್ಸಿಸ್​ ಡಿ ಸೇಲ್ಸ್​ ಚರ್ಚ್​, ಗಣೇಶ ನಗರದ ುಲ್​ ಗೋಸ್ಪೆಲ್​ ಚರ್ಚ್​ ಆ್​ ಕೆಸ್ತ್​, ನಗರಸಭೆ ಹಿಂಭಾಗದ ಚರ್ಚ್​ನಲ್ಲಿ ಬೆಳಗ್ಗೆಯಿಂದಲೇ ಹಬ್ಬದ ಚಟುವಟಿಕೆ ಕಂಡುಬಂದವು. ಮಹಿಳೆ, ಪುರುಷ, ಮಕ್ಕಳು ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ಸಾಮೂಹಿಕ ಪ್ರಾರ್ಥನೆ ನಡೆದವು. ಜನಪ್ರತಿನಿಧಿಗಳು ಸೇರಿ ಇತರ ಗಣ್ಯರು ಭಾಗಿಯಾಗಿ ಪರಸ್ಪರ ಶುಭಾಶಯ ಕೋರಿದರು. ಸಿಹಿ ಹಂಚಿ ಖುಷಿಪಟ್ಟರು. ಚರ್ಚಗಳು ವಿದ್ಯುತ್​ ದೀಪಾಲಂಕಾರದಲ್ಲಿ ಜಗಮಗ ಮಿಂಚಿದವು.
ಪಾಧರ್​ ಜೆ.ರವಿಕುಮಾರ್​, ಪಾಧರ್​ ಜೇ ಪೀಟರ್​ ಜೇಮ್ಸ್​ ಇನ್ನಿತರ ಯೇಸುವಿನ ಪ್ರಾರ್ಥನೆ ಬೋದಿಸಿದರು. ವಕೀಲರ ಸಂದ ಜಿಲ್ಲಾಧ್ಯಕ್ಷ ಎ.ವಿ.ಕಣವಿ, ವಿರುಪಣ್ಣ ನವೋದಯ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net