ನಡೆ-ನುಡಿ ಇನ್ನೊಬ್ಬರಿಗೆ ಆದರ್ಶವಾಗಲಿ

ಕುಷ್ಟಗಿಯ ಆತ್ಮಭರಿತ ಎಜೆ ಸಭೆಯಲ್ಲಿ ಗುರುವಾರ ಏರ್ಪಡಿಸಿದ್ದ ಕ್ರಿಸ್ ಮಸ್ ಹಬ್ಬಕ್ಕೆ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ ಕೇಕ್ ಕತ್ತರಿಸುವ ಮೂಲಕ ಚಾಲನೆ ನೀಡಿದರು. ಫಾದರ್ ಎಸ್.ಕೆ.ಜೋಸೆಫ್ ಇತರರು ಇದ್ದರು.
ಕುಷ್ಟಗಿಯ ಆತ್ಮಭರಿತ ಎಜೆ ಸಭೆಯಲ್ಲಿ ಗುರುವಾರ ಏರ್ಪಡಿಸಿದ್ದ ಕ್ರಿಸ್ ಮಸ್ ಹಬ್ಬಕ್ಕೆ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ ಕೇಕ್ ಕತ್ತರಿಸುವ ಮೂಲಕ ಚಾಲನೆ ನೀಡಿದರು. ಫಾದರ್ ಎಸ್.ಕೆ.ಜೋಸೆಫ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ ಹೇಳಿಕೆ
ಕುಷ್ಟಗಿ: ಎಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಬದುಕು ಸಾಗಿಸಿದಾಗ ಶಾಂತಿ ನೆಲೆಸಲು ಸಾಧ್ಯ ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ ಹೇಳಿದರು.
ಪಟ್ಟಣದ ಜಿಯೋನ್ ನಗರದ ಆತ್ಮಭರಿತ ಸಾರ್ವತ್ರಿಕ ಎಜಿ ಸಭೆಯಲ್ಲಿ ಕ್ರಿಸ್‌ಮಸ್ ಹಬ್ಬದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕ್ರಿಸ್ತನು ಮನುಕುಲಕ್ಕೆ ಬೆಳಕು ನೀಡಿದ್ದಾನೆ. ಮನುಷ್ಯನ ಕ್ರಿಯೆಗಳು ಬದಲಾಗಬೇಕು. ಆಲೋಚನೆ, ನಡೆನುಡಿ ಎಲ್ಲವೂ ಇನ್ನೊಬ್ಬರಿಗೆ ಆದರ್ಶವಾಗಬೇಕು ಎಂದರು.
ಸಮಸ್ತ ಜನತೆಯನ್ನು ಕೌಟುಂಬಿಕವಾಗಿ ಮತ್ತು ಸಾಮಾಜಿಕವಾಗಿ ಪ್ರೀತಿ, ಶಾಂತಿ ನೆಮ್ಮದಿಯೊಂದಿಗೆ ಸಹಾಯ, ಸಹಕಾರ ಸಹಬಾಳ್ವೆಯೊಂದಿಗೆ ಇಡೀ ಮನುಕುಲ ಒಂದು ವಿಶ್ವ ಕುಟುಂಬವಾಗಿ ಜೀವಿಸಲು ಕ್ರಿಸ್‌ಮಸ್ ಹಬ್ಬ ಸರ್ವರಿಗೂ ಸ್ಫೂರ್ತಿ ಹಾಗೂ ಪ್ರೇರಣೆಯಾಗಲಿ ಎಂದರು.
ಬದುಕಿನ ಜಂಜಾಟಗಳ ನಡುವೆಯೂ ದೇವರ ಪ್ರಾರ್ಥನೆ ಹಾಗೂ ಮಹಾನ್ ವ್ಯಕ್ತಿಗಳ ತತ್ವ, ಆದರ್ಶಗಳನ್ನು ಪಾಲಿಸುವ ಮೂಲಕ ಸೌಹಾರ್ದಯುತ ಜೀವನ ನಡೆಸಬೇಕಿದೆ. ಸಿಲುಬೆಗೆ ಏರಿಸುವಾಗಲೂ ಮಾನವೀಯತೆ ಮೆರೆದ ಯೇಸುಕ್ರಿಸ್ತ ಮನುಕುಲದ ಉದ್ಧಾರದ ಸಂದೇಶ ಸಾರಿದ್ದಾರೆ ಎಂದರು.
ಶಾಸಕ ದೊಡ್ಡನಗೌಡ ಪಾಟೀಲ್, ಆತ್ಮ ಭರಿತ ಸಾರ್ವತ್ರಿಕ ಎಜಿ ಸಭಾ ಪಾಲಕ ಫಾದರ್ ಎಸ್.ಕೆ. ಜೋಸೆಫ್, ಪ್ರಮುಖರಾದ ದೇವೇಂದ್ರಪ್ಪ ಬಳೂಟಗಿ, ಶೇಖರಗೌಡ ಮಾಲಿಪಾಟೀಲ್, ದೇವಪ್ಪ, ಶ್ರೀಕಾಂತ ಸರಗಣಾಚಾರಿ, ಭೀಮನಗೌಡ ಮಂಡಲಮರಿ, ರವೀಂದ್ರ ಬಾಕಳೆ, ನರಸಪ್ಪ, ಹಂಪಯ್ಯ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net