ಚಿಲ್ಮರ ತಾಯಮ್ಮ ದೇವಿ ಜಾತ್ರೆ ಅದ್ದೂರಿ

ಹಿಟ್ನಾಳ ಗ್ರಾಮದ ಶ್ರೀ ಚಿಲ್ಮರ ತಾಯಮ್ಮದೇವಿಗೆ ವಿಶೇಷ ಅಲಂಕಾರ ಮಾಡಿರುವುದು.
ಹಿಟ್ನಾಳ ಗ್ರಾಮದ ಶ್ರೀ ಚಿಲ್ಮರ ತಾಯಮ್ಮದೇವಿಗೆ ವಿಶೇಷ ಅಲಂಕಾರ ಮಾಡಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಗ್ರಾಮದ
  • ಪ್ರಮುಖ
  • ಬೀದಿಗಳಲ್ಲಿ
ಮುನಿರಾಬಾದ್: ಸಮೀಪದ ಹಿಟ್ನಾಳ ಗ್ರಾಮದ ಶ್ರೀ ಚಿಲ್ಮರ ತಾಯಮ್ಮ ದೇವಿಯ ಕಾರ್ತಿಕೋತ್ಸವ ಹಾಗೂ ಜಾತ್ರೋತ್ಸವದ ನಿಮಿತ್ತ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.
ದೇವಿಯ ಬೆಳ್ಳಿಯ ಮೂರ್ತಿಯನ್ನು ಶುಕ್ರವಾರ ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕುಂಭ, ಕಳಸ ಹಾಗೂ ಜನಪದ ವಾದ್ಯಮೇಳದೊಂದಿಗೆ ಮೆರವಣಿಗೆ ಮಾಡಲಾಯಿತು.
ರಾತ್ರಿ ದೀಪ ಬೆಳಗಿಸಿ ಕಾರ್ತಿಕೋತ್ಸವ ಆಚರಿಸಲಾಯಿತು. ಶನಿವಾರ ಬೆಳಗ್ಗೆ ದೇವಿಗೆ ಕುಂಕುಮಾರ್ಚನೆ, ಅಭಿಷೇಕ, ವಿಶೇಷ ಪೂಜೆ, ಹೂ-ಹಣ್ಣು, ಕಾಯಿ-ಕರ್ಪೂರ ಹಾಗೂ ನೈವೇದ್ಯ ಅರ್ಪಿಸಿ ಭಕ್ತಿ ಮೆರೆದರು. ದೀರ್ಘದಂಡ ನಮಸ್ಕಾರ ಹಾಕಿ ಹರಕೆ ತೀರಿಸಿದರು. ಅನ್ನಸಂತರ್ಪಣೆ ಮಾಡಲಾಯಿತು.
‘ತಾಯಿಯ ಋಣ ಮಣ್ಣಿನ ಗುಣ’ ಅರ್ಥಾತ್ ‘ಕರಿಮಣಿ ಮಾಲೀಕ ನೀನಲ್ಲ’ ಎಂಬ ನಾಟಕವನ್ನು ಉಚಿತವಾಗಿ ಪ್ರದರ್ಶನ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net