ಮಲಕಸಮುದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ಗ್ರಾಮ ಸಭೆಗೆ ಮಕ್ಕಳು ಚಾಲನೆ ನೀಡಿದರು. ಗ್ರಾಪಂ ಅಧ್ಯಕ್ಷ ಶರಣಕುಮಾರ್ ಅಮರಗಟ್ಟಿ, ಗ್ರಾಪಂ ಉಪಾಧ್ಯಕ್ಷೆ ಗಾಳೆವ್ವ ಮಾದರ, ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ ವಡ್ಡರ, ಸದಸ್ಯರಾದ ಬಸವರಾಜ ಬಿಸೆರೊಟ್ಟಿ, ಶಾಂತಮ್ಮ ಮುರಾರಿ, ಫಾತೀಮಾ ಬೇಗಂ, ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಬಸವರಾಜ ಬಳಿಗೇರಿ ಇತರರಿದ್ದರು.
ಯಲಬುರ್ಗಾ: ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಶಿಕ್ಷಕರು, ಪಾಲಕರು ಜಾಗ್ರತೆ ವಹಿಸಲಿ ಎಂದು ಗ್ರಾಪಂ ಅಧ್ಯಕ್ಷ ಶರಣಕುಮಾರ್ ಅಮರಗಟ್ಟಿ ಹೇಳಿದರು.
ತಾಲೂಕಿನ ಮಲಕಸಮುದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಕ್ಕಮ್ಯಾಗೇರಿ ಗ್ರಾಪಂ, ತಾಪಂ, ಜಿಪಂ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ಗ್ರಾಮ ಸಭೆಗೆ ಚಾಲನೆ ನೀಡಿ ಸೋಮವಾರ ಮಾತನಾಡಿದರು.
ಶಾಲೆ ಬಿಟ್ಟವರ ಹೆಸರನ್ನು ಸೂಚಿಸಿದರೆ ಪಂಚಾಯಿತಿಯಿಂದ ಅವರ ಮನೆ ಮನೆಗೆ ಭೇಟಿ ನೀಡಿ ಕರೆತರುವ ಪ್ರಯತ್ನ ಮಾಡಲಾಗುವುದು. ಇದರಿಂದ ಶಿಕ್ಷಣಕ್ಕೆ ಪೂರಕವಾಗಲಿದೆ. ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಪ್ರಮುಖ ಹಕ್ಕಾಗಿದೆ ಎಂದರು.
ಪಿಡಿಒ ವೆಂಕಟೇಶ ನಾಯಕ್ ಮಾತನಾಡಿ, ಹಂತ ಹಂತವಾಗಿ ಬೇಡಿಕೆಗಳನ್ನು ಈಡೇರಿಸಲಾಗುತ್ತಿದೆ. ವಿವಿಧ ಶಾಲೆಗಳಲ್ಲಿ ಶೌಚಗೃಹ ನಿರ್ಮಾಣ ಮಾಡುವುದು ಬಾಕಿ ಇದೆ. ಕೆಲಸಗಾರರು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಲು ಹೋಗುತ್ತಿದ್ದಾರೆ. ಹೀಗಾಗಿ ನಿಗದಿತ ಸಮಯಕ್ಕೆ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.
ಮಕ್ಕಳ ಪ್ರತಿನಿಧಿಯಾದ ಮಲಕಸಮುದ್ರ ಶಾಲೆಯ ವಿದ್ಯಾರ್ಥಿ ಅನಿತಾ ಈಳಿಗೇರ ಮಾತನಾಡಿ, ಆರೋಗ್ಯ ಇಲಾಖೆಯಿಂದ ಅವಧಿ ಮುಗಿದ ಮಾತ್ರೆ ಇತರ ಸಾಮಗ್ರಿಗಳ ವಿತರಿಸಲಾಗುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕಿ ರಾಜೇಶ್ವರಿ ರಡ್ಡೆರ, ಮುಖ್ಯ ಶಿಕ್ಷಕರಾದ ಅರಣಕುಮಾರದ ಸಾಲಿಮಠ, ವೈ.ಜಿ.ಪಾಟೀಲ್, ಬಸವಣ್ಣೆಮ್ಮ ಸಿಂದೋಗಿ, ಶಿಕ್ಷಕರಾದ ಪ್ರಾಣೇಶ ಕುಲಕರ್ಣಿ, ಡಿ.ವೈ.ಮುಜೆವಾರ, ವಿಆರ್‌ಡಬ್ಲುೃ ಕಾಳೇಶ ಕಮ್ಮಾರ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಮಕ್ಕಳು, ಗ್ರಾಪಂ ಸಿಬ್ಬಂದಿ ಇದ್ದರು.