ನಿರ್ಭಯವಾಗಿ ಎಕ್ಸಾಂ ಬರೆದ ಮಕ್ಕಳು

ಕೊಪ್ಪಳದಲ್ಲಿ ಪರೀಕ್ಷೆ ಬರೆದ ಮಕ್ಕಳು
ಕೊಪ್ಪಳದಲ್ಲಿ ಪರೀಕ್ಷೆ ಬರೆದ ಮಕ್ಕಳು
Published on

ಪ್ರಮುಖ ಮುಖ್ಯಾಂಶಗಳು

  • ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ-1 ಸುಗಮ
  • 379 ವಿದ್ಯಾರ್ಥಿಗಳು ಗೈರು
ಕೊಪ್ಪಳ: ಜಿಲ್ಲಾದ್ಯಂತ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ-1 ಬುಧವಾರ ಆರಂಭವಾಗಿದ್ದು, ಮಕ್ಕಳು ಸಡಗರ ಸಂಭ್ರಮದಿಂದ ಹಾಜರಾಗಿ ಎದುರಿಸಿದರು. ಪ್ರಥಮ ಭಾಷಾ ವಿಷಯಕ್ಕೆ 379 ವಿದ್ಯಾರ್ಥಿಗಳು ಗೈರಾದರು.
ಪರೀಕ್ಷೆಯ ಮೊದಲ ದಿನ ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯ ಕಂಡುಬಂದಿತು. ಸಮಯಕ್ಕೆ ಸರಿಯಾಗಿ ಕೇಂದ್ರಗಳ ಮುಂದೆ ಸಾಲುಗಟ್ಟಿನಿಂತ ವಿದ್ಯಾರ್ಥಿಗಳು, ನೋಟಿಸ್​ ಬೋರ್ಡ್​ಗಳಲ್ಲಿ ತಮ್ಮ ನೋಂದಣಿ ಸಂಖ್ಯೆ ಮತ್ತು ನಿಗದಿಪಡಿಸಿದ ಬ್ಲಾಕ್​ ಸಂಖ್ಯೆ ಖಚಿತಪಡಿಸಿಕೊಂಡರು. ಮೊದಲದಿನ ಪ್ರಥಮ ಭಾಷೆ ಪರೀೆ ನಡೆದಿದ್ದು, ಖುಷಿಯಿಂದಲೇ ಕೇಂದ್ರ ಹೊಕ್ಕಿದ್ದು ಕಂಡುಬಂತು.
ಮೇಲ್ವಿಚಾರಕರು ಶಿಸ್ತಿನಿಂದ ಪರೀಕ್ಷೆಗಳನ್ನು ನಡೆಸಿದರು. ನೊಡಲ್​ ಅಧಿಕಾರಿಗಳು, ಬಿಇಓಗಳು ಹಾಗೂ ಡಿಡಿಪಿಐ ಆಯ್ದ ಕೇಂದ್ರಗಳಿಗೆ ಭೇಟಿ ನೀಡಿ ವ್ಯವಸ್ಥೆ ಗಮನಿಸಿದರು. ಜಿಲ್ಲಾಡಳಿತ ಹಾಗೂ ಶಾಲಾ ಶಿಕ್ಷಣ ಇಲಾಖೆ ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತ ಭದ್ರತೆ ಮತ್ತು ಅಗತ್ಯ ಸೌಲಭ್ಯ ಕಲ್ಪಿಸಿತ್ತು. ಅಕ್ರಮಗಳಿಗೆ ಅವಕಾಶವಿಲ್ಲದಂತೆ ಬಿಗಿ ಪೊಲೀಸ್​ ಬಂದೋಬಸ್ತ್​ ಏರ್ಪಡಿಸಲಾಗಿತ್ತು.

74 ಕೇಂದ್ರಗಳಲ್ಲಿ ಪರೀಕ್ಷೆ

ಕೊಪ್ಪಳದ 21, ಗಂಗಾವತಿ 23, ಕುಷ್ಟಗಿ 15 ಹಾಗೂ ಯಲಬುರ್ಗಾ ತಾಲೂಕಿನ 15 ಒಟ್ಟು 74 ಕೇಂದ್ರಗಳಲ್ಲಿ ಪರೀಕ್ಷೆ ನಡೆದವು. 23,080 ಮಕ್ಕಳು ಪ್ರಥಮ ಭಾಷೆಗೆ ನೋಂದಣಿ ಮಾಡಿಕೊಂಡಿದ್ದರು. 22,701 ಅಭ್ಯರ್ಥಿಗಳು ಪರೀಕ್ಷೆ ಬರೆದರೆ, 379 ಮಕ್ಕಳು ಗೈರಾದರು. ಗಂಗಾವತಿ ತಾಲೂಕಿನಲ್ಲಿ 7,069 ವಿದ್ಯಾರ್ಥಿಗಳು, ಕೊಪ್ಪಳ 6,309, ಕುಷ್ಟಗಿ 4,410 ಹಾಗೂ ಯಲಬುರ್ಗಾ ತಾಲೂಕಿನಲ್ಲಿ 4,913 ವಿದ್ಯಾರ್ಥಿಗಳು ಹಾಜರಾದರು. ಗಂಗಾವತಿ ತಾಲೂಕಿನಲ್ಲಿ 122, ಕೊಪ್ಪಳ 331, ಕುಷ್ಟಗಿ 65, ಯಲಬುರ್ಗಾ ತಾಲೂಕಿನಲ್ಲಿ 61 ವಿದ್ಯಾರ್ಥಿಗಳು ಪರೀಕ್ಷೆಯಿಂದ ದೂರ ಉಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net