ಹಾಲಿಡೇ ಮುಗಿಸಿ ಕಲಿಕೆಯತ್ತ ಮಕ್ಕಳ ಪಯಾಣ

ಜಿಲ್ಲೆಯ ಕುಕನೂರು ತಾಲೂಕಿನ ಇಟಗಿಯ ಪಿಎಂಶ್ರೀ ಆದರ್ಶ್​ ವಿದ್ಯಾಲಯದಲ್ಲಿ ಶಾಲಾರಂಭದ ಹಿನ್ನಲೆಯಲ್ಲಿ ಪಾಲಕರು&ಶಿಕ್ಷಕರ ಮಹಾಸಭೆಯನ್ನು ಎಸ್​ಡಿಎಂಸಿ ಉಪಾಧ್ಯೆ ವೀಣಾ ದಳವಾಯಿ ಸಭೆ ಉದ್ಘಾಟಿಸಿದರು. ಮುಖ್ಯ ಶಿಕ್ಷಕ ರಾಮರಡ್ಡೆಪ, ಶಿಕ್ಷಕರಾದ ಜಗದೀಶ,  ರೋಹಿಣಿ, ವಿರೂಪಾಕ್ಷಪ್ಪ ಮ್ಯಾಳಿ, ನಾಗರಾಜ ಸುನಗ್​ ಇದ್ದರು.
ಜಿಲ್ಲೆಯ ಕುಕನೂರು ತಾಲೂಕಿನ ಇಟಗಿಯ ಪಿಎಂಶ್ರೀ ಆದರ್ಶ್​ ವಿದ್ಯಾಲಯದಲ್ಲಿ ಶಾಲಾರಂಭದ ಹಿನ್ನಲೆಯಲ್ಲಿ ಪಾಲಕರು&ಶಿಕ್ಷಕರ ಮಹಾಸಭೆಯನ್ನು ಎಸ್​ಡಿಎಂಸಿ ಉಪಾಧ್ಯೆ ವೀಣಾ ದಳವಾಯಿ ಸಭೆ ಉದ್ಘಾಟಿಸಿದರು. ಮುಖ್ಯ ಶಿಕ್ಷಕ ರಾಮರಡ್ಡೆಪ, ಶಿಕ್ಷಕರಾದ ಜಗದೀಶ, ರೋಹಿಣಿ, ವಿರೂಪಾಕ್ಷಪ್ಪ ಮ್ಯಾಳಿ, ನಾಗರಾಜ ಸುನಗ್​ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಒಂದು ತಿಂಗಳ ಬೇಸಿಗೆ ರಜೆ ಬಳಿಕ ಶಾಲೆಗಳು ಪುನರಾರಂಭ
ಕೊಪ್ಪಳ : ಸುಮಾರು ಒಂದು ತಿಂಗಳ ಬೇಸಿಗೆ ರಜೆ ಬಳಿಕ ಜಿಲ್ಲೆಯಾದ್ಯಂತ ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ಸೋಮವಾರ ಪುನರಾರಂಭಗೊಂಡಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಶಾಲೆಗಳತ್ತ ಮರಳಿದರು. ಹೊಸ ಶೈಕ್ಷಣಿಕ ವರ್ಷದ ಮೊದಲ ದಿನ ಶಾಲಾ ಆವರಣಗಳಲ್ಲಿ ಸಂಭ್ರಮದ ವಾತಾವರಣ ಕಂಡುಬಂತು.
ರಜೆಯ ಅವಧಿಯನ್ನು ಕುಟುಂಬದೊಂದಿಗೆ ಕಳೆದಿದ್ದ ಮಕ್ಕಳು ಹೊಸ ತರಗತಿ, ಹೊಸ ಪಠ್ಯಪುಸ್ತಕಗಳು ಹಾಗೂ ಹೊಸ ಸ್ನೇಹಿತರೊಂದಿಗೆ ಕಲಿಕೆಯನ್ನು ಆರಂಭಿಸಲು ಕಾತರದಿಂದ ಶಾಲೆಗೆ ಆಗಮಿಸಿದರು. ಹಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ಹಂಚುವ ಮೂಲಕ ಆತ್ಮೀಯ ಸ್ವಾಗತ ಕೋರಲಾಯಿತು. ಕೆಲ ಶಾಲೆಗಳಲ್ಲಿ ಶಾಲಾ ಪ್ರವೇಶೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳನ್ನು ಬರಮಾಡಿಕೊಳ್ಳಲಾಯಿತು.
ಹೊಸ ದಾಖಲಾತಿ ಪಡೆದ ವಿದ್ಯಾರ್ಥಿಗಳು ಪೋಷಕರೊಂದಿಗೆ ಶಾಲೆಗೆ ಆಗಮಿಸಿದ್ದು, ಶಾಲೆ ಆರಂಭದ ಮೊದಲ ದಿನವೇ ಪಠ್ಯಪುಸ್ತಕ ವಿತರಣೆ, ತರಗತಿ ಹಂಚಿಕೆ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು.

ಹಲಗೇರಿ ಶಾಲೆಯಲ್ಲಿ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ

ತಾಲೂಕಿನ ಹಲಗೇರಿ ಗ್ರಾಮದ ಕನಕನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಸರಕಾರದ ಆದೇಶದಂತೆ ಶಾಲೆಯಲ್ಲಿ ಸರಸ್ವತಿ ಪೂಜೆಯೊಂದೆ ಶಾಲೆ ಆರಂಬಿಸಲಾಯಿತು. ಶಾಲಾ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರ ನೀಡಲಾಯಿತು. ಶಾಲಾ ಮುಖ್ಯ ಶಿಕ್ಷಕ ಬಸನಗೌಡ ಪಾಟೀಲ, ಶಿಕ್ಷಕರಾದ ದೇವಪ್ಪ ಒಂಟಿಗಾರ, ಹನುಮವ್ವ ಕಂಬಳಿ ಇದ್ದರು.

ಸಿಪಿಎಸ್​ ಶಾಲಾ ಪ್ರಾರಂಭೋತ್ಸವ

ನಗರದ ಸಿಪಿಎಸ್​ ಶಾಲೆಯಲ್ಲಿ ಕೂಡಾ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಜರುಗಿತು. ಶಾಲೆ ಎಸ್​ಡಿಎಂ ಅಧ್ಯಕ್ಷ ರವಿಂದ್ರ ಬಾಗಲಿ ಸರ್ಕಾರದ ಉಚಿತ ಪಠ್ಯ ಪುಸ್ತಕಗಳನ್ನು ಮಕ್ಕಳಿಗೆ ನೀಡಿದರು. ಶಿಕ್ಷಕರಾದ ಬೀರಪ್ಪ ಅಂಡಗಿ ಚಿಲವಾಡಗಿ, ಕಾಶಿನಾಥ ಸಿರಿಗೇರಿ, ವಿರುಪಾಕ್ಷಪ್ಪ ಬಾಗೋಡಿ, ಆಬೀದಹುಸೇನ, ಶಿಕ್ಷಕಕಿಯರಾದ ಭಾರತಿ ಆಡೂರು,ಜಯಶ್ರೀ ದೇಸಾಯಿ, ಶೀಲಾ ಬಂಡಿ, ಶಶಿಕಲಾ, ಜಲಜಾಕ್ಷಿ ಇದ್ದರು.

ಆದರ್ಶ್​ ವಿದ್ಯಾಲಯದಲ್ಲಿ ಪಾಲಕರು&ಶಿಕ್ಷಕರ ಮಹಾಸಭೆ

ಜಿಲ್ಲೆಯ ಕುಕನೂರು ತಾಲೂಕಿನ ಇಟಗಿಯ ಪಿಎಂಶ್ರೀ ಆದರ್ಶ್​ ವಿದ್ಯಾಲಯದಲ್ಲಿ ಶಾಲಾರಂಭದ ಹಿನ್ನಲೆಯಲ್ಲಿ ಪಾಲಕರು&ಶಿಕ್ಷಕರ ಮಹಾಸಭೆ ಏರ್ಪಡಿಸಲಾಗಿತ್ತು.
ಎಸ್​ಡಿಎಂಸಿ ಉಪಾಧ್ಯೆ ವೀಣಾ ದಳವಾಯಿ ಸಭೆ ಉದ್ಘಾಟಿಸಿದರು. ಮುಖ್ಯ ಶಿಕ್ಷಕ ರಾಮರಡ್ಡೆಪ್ಪ ಸಭೆಯ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು. ಶಿಕ್ಷಕ ನಾಗರಾಜ ಸುನಗ್​ ಅವರು ಪಾಲಕರು ಮತ್ತು ಅತಿಥಿಗಳನ್ನು ಸ್ವಾಗತಿಸಿದರು. ಸಭೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ, ಹಾಜರಾತಿ, ಶಿಸ್ತು, ಶಾಲೆ ಅಭಿವೃದ್ಧಿ ಹಾಗೂ ಮುಂದಿನ ಶೈಕ್ಷಣಿಕ ಚಟುವಟಿಕೆಗಳ ಕುರಿತು ಚರ್ಚೆ ನಡೆಯಿತು. ಪಾಲಕರು ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡಿದರು.
ಶಿಕ್ಷಕರಾದ ಜಗದೀಶ, ರೋಹಿಣಿ, ವಿರೂಪಾಕ್ಷಪ್ಪ ಮ್ಯಾಳಿ, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಸಿಬ್ಬಂದಿ ವರ್ಗದವರು, ಪಾಲಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net