ಮಕ್ಕಳಿಗೆ ಕಾನೂನಿನ ಜ್ಞಾನ ಅವಶ್ಯ

ಸಿದ್ದಾಪುರದಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕೊಪ್ಪಳ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಶಶಿಧರ ಶೆಟ್ಟಿ , ನ್ಯಾಯಾಧೀಶರಾದ ಜಯಶಂಕರ್, ಸದಾನಂದ ನಾಗಪ್ಪ ನಾಯ್ಕ, ಮಹಾಂತೇಶ್ ದರಗದ್, ಮೇಘಾ ಸೋಮಣ್ಣನವರ್, ಎಚ್.ಆರ್.ಎ.ಸಿ.ಎಫ್ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಮೋಹನ್ ರಾವ್ ನಾಲ್ವಡೆ ಇತರರಿದ್ದರು.
ಸಿದ್ದಾಪುರದಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕೊಪ್ಪಳ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಶಶಿಧರ ಶೆಟ್ಟಿ , ನ್ಯಾಯಾಧೀಶರಾದ ಜಯಶಂಕರ್, ಸದಾನಂದ ನಾಗಪ್ಪ ನಾಯ್ಕ, ಮಹಾಂತೇಶ್ ದರಗದ್, ಮೇಘಾ ಸೋಮಣ್ಣನವರ್, ಎಚ್.ಆರ್.ಎ.ಸಿ.ಎಫ್ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಮೋಹನ್ ರಾವ್ ನಾಲ್ವಡೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಾನೂನು
  • ಅರಿವು
  • ಕಾರ್ಯಕ್ರಮ
ನ್ಯಾಯಾಧೀಶ ಶಶಿಧರ ಶೆಟ್ಟಿ ಹೇಳಿಕೆ ಕಾನೂನು ಅರಿವು ಕಾರ್ಯಕ್ರಮ
ಸಿದ್ದಾಪುರ: ಪ್ರತಿಯೊಬ್ಬರೂ ಕಾನೂನಿನ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿದೆ ಎಂದು ಕೊಪ್ಪಳ ಜಿಲ್ಲಾ ಸೆಷನ್ ನ್ಯಾಯಾಧೀಶ ಶಶಿಧರ ಶೆಟ್ಟಿ ಹೇಳಿದರು.
ಗ್ರಾಮದ ಕಸ್ತೂರ ಬಾ ಗಾಂಧಿ ವಸತಿ ವಿದ್ಯಾಲಯದ ಆವರಣದಲ್ಲಿ ಭಾನುವಾರ ರಾಜ್ಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಗಂಗಾವತಿ ಕಾನೂನು ಸೇವಾ ಸಮಿತಿ, ಜಿಲ್ಲಾ ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಪೋಕ್ಸೋ ಹಾಗೂ ಬ್ರೂಣ ಹತ್ಯೆ ತಡೆಯ ಬಗ್ಗೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಮುಖ್ಯವಾಗಿ ಕಾನೂನಿನ ಜ್ಞಾನವನ್ನು ಪಡೆದು ಪಡೆದುಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಈವರೆಗೆ ಬಹುತೇಕ ಜನರಿಗೆ ಮಗು ಹುಟ್ಟಿದ ನಂತರ ಜನನ ಪ್ರಮಾಣ ಪತ್ರ ಮಾಡಿಸುವುದೇ ಗೊತ್ತಿಲ್ಲ. 20 ಸಾವಿರಕ್ಕೂ ಹೆಚ್ಚು ಮಕ್ಕಳು ವಯಸ್ಸಿನ ಮುಂಚೆಯೇ ಗರ್ಭಿಣಿಯರಾದ ವರದಿ ಪತ್ರಿಕೆಗಳಲ್ಲಿ ಓದಿದ್ದೇನೆ. ಬ್ರೂಣ ಹತ್ಯೆ ದೇಶದ ಪೀಡುಗಾಗಿದೆ. ವೈದ್ಯರು ದೇವರಿಗೆ ಸಮಾನ ಎಂಬ ಮಾತಿದೆ. ಆದರೆ, ಕೆಲವರು ಇದನ್ನು ಹಣಗಳಿಸುವ ಮಾರ್ಗ ಮಾಡಿಕೊಂಡಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಮಂಗಳೂರು ಜಿಲ್ಲಾ ನ್ಯಾಯಾಧೀಶ ಜಯಶಂಕರ್ ಮಾತನಾಡಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕಾಯ್ದೆ 2012ರಲ್ಲಿ ಜಾರಿಗೆ ಬಂದರೂ, ಇಂದಿಗೂ ಪೋಕ್ಸೋ ಪ್ರಕರಣಗಳು ಹೆಚ್ಚುತ್ತಿವೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿದಾಗ ಪ್ರಕರಣಗಳು ಕಡಿಮೆಯಾಗಬಹುದು. ಬಾಲ್ಯ ವಿವಾಹದಲ್ಲಿ ಕೊಪ್ಪಳ ಜಿಲ್ಲೆ ರಾಜ್ಯದಲ್ಲಿ 7ನೇ ಸ್ಥಾನದಲ್ಲಿದೆ ಎಂಬ ವರದಿಯಿದೆ ಎಂದರು.
ತಹಸೀಲ್ದಾರ್ ಎಂ. ಕುಮಾರಸ್ವಾಮಿ, ತಾಪಂ ಇ.ಒ ಲಕ್ಷ್ಮೀದೇವಿ, ಬಿಇಒ ನಟೇಶ, ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್, ಗಂಗಾವತಿ ವಕೀಲರ ಸಂಘದ ಅಧ್ಯಕ್ಷ ಶರಣಬಸಪ್ಪ ನಾಯಕ, ಸಿಡಿಪಿಒ ವಿರೂಪಾಕ್ಷಿ ಸ್ವಾಮಿ, ಮುಖ್ಯ ಶಿಕ್ಷಕ ಚಂದ್ರಶೇಖರ ಗಣವಾರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net