ಕೊಪ್ಪಳದಲ್ಲಿ ಆಯೋಜಿಸಿದ್ದ ಮಕ್ಕಳ ಪಾಲನಾ ಸಂಸ್ಥೆಗಳ ಮುಖ್ಯಸ್ಥರು ಮತ್ತು ಭಾಗೀದಾರ ಅಧಿಕಾರಿಗಳಿಗೆ ದತ್ತು ಮಾರ್ಗಸೂಚಿಗಳ ತರಬೇತಿ ಕಾರ್ಯಗಾರವನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧು ಅಂಗಡಿ ಉದ್ಘಾಟಿಸಿದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಪ್ರಕಾಶ ಕಡಗದ, ವೇರ್ ಆರ್ ಇಂಡಿಯನ್ ಚಿಲ್ಡ್ರನ್ ಸಂಸ್ಥೆಯ ಯೋಜನಾ ನಿರ್ದೇಶಕಿ ಅಮೃತಾ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಿಂಧು ಅಂಗಡಿ ಸೂಚನೆ
ಪಾಲನಾ ಸಂಸ್ಥೆಗಳ ಮುಖ್ಯಸ್ಥರ ತರಬೇತಿ ಕಾರ್ಯಗಾರ
ಕೊಪ್ಪಳ : ಮಕ್ಕಳ ಮೇಲೆ ಯಾವುದೇ ರೀತಿಯ ಹಲ್ಲೆ, ದೌರ್ಜನ್ಯ ಮತ್ತು ಕಿರುಕುಳಗಳು ನಡೆಯದಂತೆ ಮಕ್ಕಳ ಪಾಲನಾ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಭಾಗೀದಾರರು ಸೂಕ್ತ ಕ್ರಮವಹಿಸಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧು ಅಂಗಡಿ ಹೇಳಿದರು.
ಕೊಪ್ಪಳ ತಾಪಂ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಮಕ್ಕಳ ಪಾಲನಾ ಸಂಸ್ಥೆಗಳ ಮುಖ್ಯಸ್ಥರು ಮತ್ತು ಭಾಗೀದಾರ ಅಧಿಕಾರಿಗಳಿಗೆ ದತ್ತು ಮಾರ್ಗಸೂಚಿಗಳ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು.
ವಿಶ್ವ ಸಂಸ್ಥೆ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಅನ್ವಯ ಜೈವೀಕ ಪಾಲಕರಿಂದ ಮಕ್ಕಳನ್ನು ಅನಗತ್ಯವಾಗಿ ಬೇರ್ಪಡೆಸುವಂತಿಲ್ಲ. ಮಗುವಿನ ಹಿತದೃಷ್ಟಿಯಿಂದ ತೀರಾ ಅಗತ್ಯವಿದ್ದಲ್ಲಿ ಮಾತ್ರವೇ ಕುಟುಂಬದಿಂದ ಬೇರ್ಪಡಿಸಬಹುದು. ದತ್ತು ಪೂರ್ವದಲ್ಲಿ ಮಕ್ಕಳೊಂದಿಗೆ ಆಪ್ತ ಸಮಾಲೋಚನೆ ಕಡ್ಡಾಯ. ಸಾಂಸ್ಥಿಕ ಸೇವೆಯು ಮಕ್ಕಳಿಗೆ ಕೊನೆ ಆಯ್ಕೆ. ಮಗುವಿನ ಪೋಷಣೆ ಮತ್ತು ರಕ್ಷಣೆ ಕುಟುಂಬದ ಜವಾಬ್ದಾರಿ. ಮಕ್ಕಳು ಮರಳಿ ಕುಟುಂಬಕ್ಕೆ ಸೇರ್ಪಡೆ ಮತ್ತು ಪುನ@ ಸ್ಥಾಪನೆಯ ಬಗ್ಗೆ ಮತ್ತು ಯಾವುದೇ ಪುನರವಸತಿ ಕ್ರಮಗಳು ಮಗುವಿನ ಹಿತಕ್ಕಾಗಿ ಕೈಗೊಳ್ಳುವಂತೆ ಮಕ್ಕಳ ನ್ಯಾಯ ಕಾಯ್ದೆ-&2015ರ ಮೂಲ ತತ್ವದಲ್ಲಿ ತಿಳಿಸುತ್ತದೆ. ಈ ಎಲ್ಲಾ ಅಂಶಗಳನ್ನು ಪಾಲಿಸಿ ನಿಮ್ಮ ಸಂಸ್ಥೆಗಳಲ್ಲಿ ಕಳೆದ ಎರಡು ವರ್ಷಗಳಲ್ಲಿ ಯಾವುದೇ ಮಗುವಿನ ಪಾಲಕರು ಕನಿಷ್ಠ ಮಕ್ಕಳ ಭೇಟಿಗೂ ಸಹ ಆಗಮಿಸದಿದ್ದರೆ, ಅಂತಂಹ ಮಕ್ಕಳನ್ನು ಗುರುತಿಸಿ ದತ್ತು ಕಾರ್ಯಕ್ರಮಕ್ಕೆ ಒಳಪಡಿಸಿ ಎಂದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಪ್ರಕಾಶ ಕಡಗದ, ಬೆಂಗಳೂರಿನ ವೇರ್ ಆರ್ ಇಂಡಿಯನ್ ಚಿಲ್ಡ್ರನ್ ಸಂಸ್ಥೆಯ ಯೋಜನಾ ನಿರ್ದೇಶಕಿ ಅಮೃತಾ, ಶ್ರೇಯಸ್, ಶಿವರಾಜ್, ರವಿಕುಮಾರ ಪವಾರ, ರವಿ ಬಡಿಗೇರ ಇತರರಿದ್ದರು.
"
ಜಿಲ್ಲೆಯಲ್ಲಿ ಕಳೆದ 10 ವರ್ಷಗಳಲ್ಲಿ 23 ಮಕ್ಕಳು ಪರಿತ್ಯಜಿಸಲ್ಪಟ್ಟಿವೆ. ಮಕ್ಕಳ ನ್ಯಾಯ ಕಾಯ್ದೆ-&2015ರಡಿಯಲ್ಲಿ, ಕೇಂದ್ರ ದತ್ತು ಪ್ರಾಧಿಕಾರದ ಸಹಯೋಗದೊಂದಿಗೆ ಒಟ್ಟು 53 ಮಕ್ಕಳಲ್ಲಿ 44 ಮಕ್ಕಳನ್ನು ದೇಶದೊಳಗೆ ಹಾಗೂ 9 ಮಕ್ಕಳನ್ನು ವಿದೇಶಿ ಪಾಲಕರಿಗೆ ಕಾನೂನು ಬದ್ಧವಾಗಿ ದತ್ತು ನೀಡಲಾಗಿದೆ.
— ಪ್ರಕಾಶ ಕಡಗದ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ, ಕೊಪ್ಪಳ