

ಪ್ರತಿ ವರ್ಷವೂ ಅಲ್ಲಿನ ಜನತೆ ಗುಳೆ ಹೋಗುತ್ತಾರೆ ಎಂಬುದಾಗಿ ತಿಳಿದು ಬಂದಿದೆ,. ಹೀಗೆ ಗುಳೆ ಹೋಗುವವರನ್ನು ತಡೆಯಲು ಗ್ರಾಪಂ ಪಿಡಿಒ ಶ್ರಮ ವಹಿಸಿದ್ದರೂ ಸಹ ಗುಳೆ ಹೋಗಿದ್ದಾರೆ. ಇದನ್ನು ತಡೆಯಲು ಕ್ರಮ ವಹಿಸಲಾಗುವುದು.
ಗ್ರಾಪಂನಿಂದ ನರೇಗಾ ಕೆಲಸವನ್ನು ಈ ಸಮಯದಲ್ಲಿ ನೀಡುತ್ತಿಲ್ಲ. ಕೃಷಿ ಚಟುವಟಿಕೆ ಇದ್ದಾಗ ನೀಡಲಾಗುತ್ತಿದೆ. ಹೀಗಾಗಿ ಊರಲ್ಲಿ ಶೇ.50 ಜನ ಉದ್ಯೋಗ ಅರಸಿ ಗುಳೆ ಹೋಗಿದ್ದಾರೆ.
ಶಾಲೆಯ ಮಕ್ಕಳು ಗುಳೆ ಹೋಗುವುದನ್ನು ಗಮನಿಸಿ ವಾಹನದ ಬಳಿ ಪಾಲಕರ ಮನವೊಲಿಸಿ ನಾಲ್ಕೈದು ಮಕ್ಕಳು ಹೋಗುವುದನ್ನು ತಪ್ಪಿಸಿದ್ದೇನೆ. ಆದರೂ ಮೂರ‌್ನಾಲ್ಕು ಮಕ್ಕಳು ಪಾಲಕರೊಂದಿಗೆ ತೆರಳಿದ್ದಾರೆ.