ಚೆಕ್ ಡ್ಯಾಂ ಒಡೆದು ಜಮೀನಿಗೆ ನೀರು

1) ಅಳವಂಡಿ ಹತ್ತಿರದ ಹಿರೇಹಳ್ಳದ ಚೆಕ್ ಡ್ಯಾಂ ಒಡ್ದು ಒಡೆದಿರುವುದು. 2) ಅಳವಂಡಿ ಸಮೀಪದ ಘಟ್ಟಿರಡ್ಡಿಹಾಳ ಹತ್ತಿರದ ಹಿರೇಹಳ್ಳ ಸೇತುವೆ ಮುಳುಗಿರುವುದು.
1) ಅಳವಂಡಿ ಹತ್ತಿರದ ಹಿರೇಹಳ್ಳದ ಚೆಕ್ ಡ್ಯಾಂ ಒಡ್ದು ಒಡೆದಿರುವುದು. 2) ಅಳವಂಡಿ ಸಮೀಪದ ಘಟ್ಟಿರಡ್ಡಿಹಾಳ ಹತ್ತಿರದ ಹಿರೇಹಳ್ಳ ಸೇತುವೆ ಮುಳುಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ದಾಳಿಂಬೆ ತೋಟ ಜಲಾವೃತ
  • ಅಳವಂಡಿ ಭಾರಿ ಮಳೆಗೆ ಒಡೆದ ಒಡ್ಡು
ಅಳವಂಡಿ: ಸಮೀಪದ ಅಜ್ಜಪ್ಪಯ್ಯನ ಮಠದ ಬಳಿ ಹಿರೇಹಳ್ಳದ ಚೆಕ್ ಡ್ಯಾಂ ಪಕ್ಕದ ಒಡ್ಡು ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ಒಡೆದು ಹೋಗಿದ್ದು, ಅಪಾರ ಪ್ರಮಾಣದ ನೀರು ಪಕ್ಕದ ಕೃಷಿ ಜಮೀನುಗಳಿಗೆ ನುಗ್ಗಿದೆ.
ಗ್ರಾಮದ ರೈತರಾದ ಚೌಡಪ್ಪ ಜಂತ್ಲಿ ಅವರ ಕಬ್ಬಿನ ತೋಟ ಹಾಗೂ ಚಂದ್ರಪ್ಪ ಜಂತ್ಲಿ ಅವರ ದಾಳಿಂಬೆ ತೋಟ ಜಲಾವೃತಗೊಂಡಿವೆ. ಹಿರೇಹಳ್ಳದ ಮೆಲ್ಭಾಗದಲ್ಲಿ ಮಳೆಯಿಂದಾಗಿ ಚೆಕ್ ಡ್ಯಾಂಗೆ ಒಳಹರಿವು ಹೆಚ್ಚಾಗಿ ಡ್ಯಾಂನ ಒಂದು ಭಾಗ ಸಂಪೂರ್ಣ ಕೊಚ್ಚಿ ಹೋಗಿದೆ. ನೀರಿನ ರಭಸಕ್ಕೆ ತೋಟದ ಮೇಲ್ಮಣ್ಣು ಕೊಚ್ಚಿ ಹೋಗಿದ್ದು, ಕೃಷಿ ಮಾಡುವುದು ಕಷ್ಟಕರವಾಗಿದೆ.
ಆದ್ದರಿಂದ ಒಡೆದು ಹೋಗಿರುವ ಚೆಕ್ ಡ್ಯಾಂ ಒಡ್ಡನ್ನು ತುರ್ತಾಗಿ ನಿರ್ಮಿಸಬೇಕೆಂದು ರೈತರು ಆಗ್ರಹಿಸಿದ್ದಾರೆ. ಇನ್ನು ಬೆಳಗಟ್ಟಿ-ಕವಲೂರು ರಸ್ತೆಯ ಘಟ್ಟಿರಡ್ಡಿಹಾಳ ಬಳಿಯ ಹಳ್ಳದ ಸೇತುವೆ ಮುಳುಗಿ ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net