ಲಿಂ.ಶ್ರೀ ರಾಜಶೇಖರಪ್ಪ ಹೊಸ್ಕೇರಾ, ಚನ್ನಬಸಮ್ಮ ಈಶ್ವರಪ್ಪ ಮುನವಳ್ಳಿ, ಬಸವರಾಜ ಕೋಟಿ, ಡಿ.ಗೋವರ್ಧನ ರಾಮಚಂದ್ರಪ್ಪ ದರೋಜಿ ಸ್ಮರಣಾರ್ಥ ದತ್ತಿ ಉಪನ್ಯಾಸ ಜರುಗಿತು. ವಿವಿಧ ಕ್ಷೇತ್ರದ ಸಾಧಕರಾದ ವೈ.ನಾಗರಾಜ್ ಹೇಮಗುಡ್ಡ, ಎಸ್.ಎಂ.ಪಟೇಲ್, ವಕೀಲ ಸೋಮನಾಥ ಪಟ್ಟಣಶೆಟ್ಟಿ ಮತ್ತು ಸುರೇಶ ಸಂಕನೂರ್ ಅವರನ್ನು ಸನ್ಮಾನಿಸಲಾಯಿತು. ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕ ಎ.ಕೆ.ಮಹೇಶಕುಮಾರ, ಸಾಹಿತಿ ಅರಳಿ ನಾಗಭೂಷಣ ಮತ್ತು ಜನಪದ ಗಾಯಕ ಸುಖಮುನಿ ಉಪನ್ಯಾಸ ನೀಡಿದರು.