ಗಂಗಾವತಿ ತಾಲೂಕಿನ ಬಸಾಪಟ್ಟಣದಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಪಿಐ ರಂಗಪ್ಪ ಎಚ್.ದೊಡ್ಮನಿ ಗುರುವಾರ ಮಾತನಾಡಿದರು. ಹಾಲುಮತ ಸಮಾಜದ ಪೀಠಾಧಿಪತಿಗಳಾದ ಸಿದ್ದರಾಮಯ್ಯ ಗುರುವಿನ್, ಸಿದ್ದಯ್ಯ ಗುರುವಿನ್, ದಳಪತಿ ಮಹ್ಮದ್‌ಸಾಬ್, ಎಪಿಎಂಸಿ ಮಾಜಿ ಸದಸ್ಯ ಸಣ್ಣಕ್ಕಿ ನೀಲಪ್ಪ ಇತರರಿದ್ದರು.
ಗಂಗಾವತಿ: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ವದಂತಿಗಳಿಗೆ ಕಿವಿಗೊಡದೇ ಸಾಮರಸ್ಯದಿಂದ ಎಲ್ಲ ಸಮುದಾಯದ ಹಬ್ಬಗಳನ್ನು ಆಚರಿಸುವಂತೆ ಗ್ರಾಮೀಣ ಪಿಐ ರಂಗಪ್ಪ ಎಚ್.ದೊಡ್ಮನಿ ಸಲಹೆ ನೀಡಿದರು.
ತಾಲೂಕಿನ ಬಸಾಪಟ್ಟಣ ಸಮುದಾಯ ಭವನದ ಬಳಿ ಗ್ರಾಮೀಣ ಪೊಲೀಸ್ ಠಾಣೆಯಿಂದ ಬಕ್ರೀದ್ ಹಬ್ಬದ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಆಧಾರ ರಹಿತ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದರಿಂದ ಸಮಾಜದ ಸ್ವಾಸ್ಥೃದ ಮೇಲೆ ಪರಿಣಾಮ ಬೀರುತ್ತಿದೆ. ಬಕ್ರೀದ್ ಹಬ್ಬವನ್ನು ಸಾಮರಸ್ಯದಿಂದ ಅಚರಿಸಬೇಕಿದ್ದು, ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು.
ಕೋಮು ಪ್ರಚೋದನೆ ವಿಚಾರಗಳು ಬಂದಾಗ ಪೊಲಿಸರ ಗಮನಕ್ಕೆ ತರಬೇಕಿದ್ದು, ಗಲಾಟೆಗಳಿಗೆ ಅವಕಾಶ ನೀಡಬಾರದು. ಪ್ರಮುಖ ಪ್ರಾರ್ಥನಾ ಮಂದಿರ ಬಳಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಬೇಕಿದ್ದು, ಹಬ್ಬದ ಸಂದರ್ಭದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗುವುದು ಎಂದರು.
ಗ್ರಾಮದ ಸ್ವಚ್ಛತೆ, ಕುಡಿವ ನೀರು ಹಾಗೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ಎಚ್ಚರವಹಿಸಲು ಗ್ರಾಮಾಡಳಿತಕ್ಕೆ ಸೂಚಿಸಬೇಕೆಂದು ಗ್ರಾಮಸ್ಥರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರು.
ಹಾಲುಮತ ಸಮಾಜದ ಪೀಠಾಧಿಪತಿಗಳಾದ ಸಿದ್ದರಾಮಯ್ಯ ಗುರುವಿನ್, ಸಿದ್ದಯ್ಯಗುರುವಿನ್, ದಳಪತಿ ಮಹ್ಮದ್‌ಸಾಬ್, ಎಪಿಎಂಸಿ ಮಾಜಿ ಸದಸ್ಯ ಸಣ್ಣಕ್ಕಿ ನೀಲಪ್ಪ, ಪ್ರಮುಖರಾದ ಕೆ.ಮಹೆಬೂಬ್‌ಸಾಬ್, ಆಂಜನೇಯ ನಾಯಕ, ದ್ಯಾವಣ್ಣ ಅಂಗಡಿ, ಎಸ್.ರಾಮಕೃಷ್ಣ ಇತರರಿದ್ದರು.