ಕನಕಗಿರಿ: ಜೂನ್ ಕೊನೇ ವಾರ ಆರಂಭವಾಗುವ ಎಸ್‌ಐಆರ್ ಪ್ರಕ್ರಿಯೆಗೆ ನೇಮಕಗೊಂಡ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದು ನೋಡಲ್ ಅಧಿಕಾರಿ ಹಾಗೂ ಜಿಪಂ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ ಹೇಳಿದರು.
ಇಲ್ಲಿನ ತಾಪಂ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಎಸ್‌ಐಆರ್ ಪ್ರಕ್ರಿಯೆ ಕುರಿತ ಕಂದಾಯ, ಪಂಚಾಯತ್ ರಾಜ್ ಸಭೆಯಲ್ಲಿ ಮಾತನಾಡಿದರು. ಜೂ.20ರಿಂದ ಆರಂಭವಾಗುವ ಎಸ್‌ಐಆರ್ ಪ್ರಕ್ರಿಯೆಗೆ ಮೊದಲ 3 ದಿನಗಳ ಕಾಲ ತರಬೇತಿ ನೀಡಲಾಗುತ್ತಿದ್ದು, ಜೂ.30ರಿಂದ ಜು.29ರವರೆಗೆ ಮನೆ ಮನೆ ಭೇಟಿ ನಡೆಯಲಿದೆ. ನಂತರ ಹಂತ ಹಂತವಾಗಿ ಅಕ್ಟೋಬರ್‌ವರೆಗೆ ಮುಂದಿನ ಪ್ರಕ್ರಿಯೆ ನಡೆಯಲಿವೆ. ನಿಯೋಜನೆಗೊಂಡ ಸಿಬ್ಬಂದಿ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ನಿಭಾಯಿಸಬೇಕು ಎಂದರು.