ಉಪಟಳ ನೀಡುತ್ತಿದ್ದ ಕೋತಿಗಳ ಸೆರೆ

ಗಂಗಾವತಿ ಬನ್ನಿಗಿಡದ ಕ್ಯಾಂಪ್‌ನಲ್ಲಿ ಉಪಟಳ ನೀಡುತ್ತಿದ್ದ ಕೋತಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಭಾನುವಾರ ಕಾರ್ಯಾಚರಣೆ ನಡೆಸಿ ಸೆರೆಹಿಡಿದರು. ಮಾಜಿ ಶಾಸಕ ಪರಣ್ಣಮುನವಳ್ಳಿ, ಅರಣ್ಯ ಸಂರಕ್ಷಕ ಬಸವರಾಜ ಪೂಜಾರಿ, ಅರಣ್ಯ ಸಿಬ್ಬಂದಿ  ಜಾವೇದ್ ಭಾಷಾ, ಚಂದ್ರಶೇಖರ್ ರಾಥೋಡ್ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಅರಣ್ಯ
  • ಪ್ರದೇಶದಲ್ಲಿ
  • ಬಿಡುವ
ಗಂಗಾವತಿ: ನಗರದ ಬನ್ನಿಗಿಡದ ಕ್ಯಾಂಪ್‌ನಲ್ಲಿ ಉಪಟಳ ನೀಡುತ್ತಿದ್ದ ಕೋತಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಭಾನುವಾರ ಕಾರ್ಯಾಚರಣೆ ನಡೆಸಿ ಸೆರೆಹಿಡಿದರು.
ಮೂರು ಕೋತಿಗಳು ಕ್ಯಾಂಪ್‌ನಲ್ಲಿ ಬೀಡು ಬಿಟ್ಟಿದ್ದು, ನಿವಾಸಿಗಳು ಮತ್ತು ಸಂಚಾರಿಗಳ ಮೇಲೆ ದಾಳಿ ನಡೆಸುತ್ತಿದ್ದವು. ಇದರಿಂದ ಮೂವರಿಗೆ ಗಾಯವಾಗಿದ್ದವು. ಕೋತಿ ಸೆರೆಗಾಗಿ ಸ್ಥಳೀಯರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.
ಸ್ಥಳಕ್ಕೆ ಬೋನಿನೊಂದಿಗೆ ಆಗಮಿಸಿದ್ದ ಅರಣ್ಯ ಸಂರಕ್ಷಕ ಬಸವರಾಜ ಪೂಜಾರಿ ನೇತೃತ್ವದ ತಂಡ, ಮೂರು ಕೋತಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅರಣ್ಯ ಪ್ರದೇಶದಲ್ಲಿ ಬಿಡುವ ಬಗ್ಗೆ ಅರಣ್ಯ ಸಿಬ್ಬಂದಿ ಮಾಹಿತಿ ನೀಡಿದರು. ಕೋತಿಗಳ ಸೆರೆಯಿಂದ ಸ್ಥಳೀಯರು ನಿಟ್ಟುಸಿರು ಬಿಟ್ಟರು. ಮಾಜಿ ಶಾಸಕ ಪರಣ್ಣಮುನವಳ್ಳಿ, ಉದ್ಯಮಿ ಗೋಪಾಲ ಜಕ್ಕಾ, ಅರಣ್ಯ ಸಿಬ್ಬಂದಿ ಜಾವೇದ್ ಭಾಷಾ, ಚಂದ್ರಶೇಖರ್ ರಾಥೋಡ್, ಗುಂಡಪ್ಪ, ಎಂ.ಡಿ.ಸುಲೇಮಾನ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net