ನ್ಯಾಯಬೆಲೆ ಅಂಗಡಿ ಮಾಲೀಕತ್ವ ರದ್ದು ಮಾಡಿ

ಕುಷ್ಟಗಿಯಲ್ಲಿ ಕರವೇ ಗ್ರಾಮ ಘಟಕದ ಪದಾಧಿಕಾರಿಗಳು ತಹಸೀಲ್ದಾರ್ ಅಶೋಕ್ ಶಿಗ್ಗಾವಿಗೆ ಮನವಿ ಸಲ್ಲಿಸಿದರು. ಕರವೇ ತಾಲೂಕು ಘಟಕದ ಅಧ್ಯಕ್ಷ ಪ್ರಕಾಶ ಮನ್ನೇರಾಳ್, ಗೌರವಾಧ್ಯಕ್ಷ ಮರಿಯಪ್ಪ, ಉಪಾಧ್ಯಕ್ಷ ಬಾಲಪ್ಪ ಭೋವಿ, ಗ್ರಾಮ ಘಟಕ ಅಧ್ಯಕ್ಷ ಯಮನೂರಸಾಬ್ ಇತರರಿದ್ದರು.
ಕುಷ್ಟಗಿಯಲ್ಲಿ ಕರವೇ ಗ್ರಾಮ ಘಟಕದ ಪದಾಧಿಕಾರಿಗಳು ತಹಸೀಲ್ದಾರ್ ಅಶೋಕ್ ಶಿಗ್ಗಾವಿಗೆ ಮನವಿ ಸಲ್ಲಿಸಿದರು. ಕರವೇ ತಾಲೂಕು ಘಟಕದ ಅಧ್ಯಕ್ಷ ಪ್ರಕಾಶ ಮನ್ನೇರಾಳ್, ಗೌರವಾಧ್ಯಕ್ಷ ಮರಿಯಪ್ಪ, ಉಪಾಧ್ಯಕ್ಷ ಬಾಲಪ್ಪ ಭೋವಿ, ಗ್ರಾಮ ಘಟಕ ಅಧ್ಯಕ್ಷ ಯಮನೂರಸಾಬ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಅಶೋಕ್ ಶಿಗ್ಗಾವಿಗೆ ಮನವಿ
  • ಕರವೇ ಗ್ರಾಮ ಘಟಕದ ಪದಾಧಿಕಾರಿಗಳ ಒತ್ತಾಯ
ಕುಷ್ಟಗಿ: ತಾಲೂಕಿನ ಹುಲಿಯಾಪೂರು ಗ್ರಾಮದ ನ್ಯಾಯಬೆಲೆ ಅಂಗಡಿ ಮಾಲೀಕತ್ವ ತಗೆದು ಹಾಕುವಂತೆ ಒತ್ತಾಯಿಸಿ ಕರವೇ ಗ್ರಾಮ ಘಟಕದ ಪದಾಧಿಕಾರಿಗಳು ಪಟ್ಟಣದಲ್ಲಿ ತಹಸೀಲ್ದಾರ್ ಅಶೋಕ್ ಶಿಗ್ಗಾವಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಘಟಕದ ಅಧ್ಯಕ್ಷ ಯಮನೂರಸಾಬ್ ಮಾತನಾಡಿ, ಗ್ರಾಮದಲ್ಲಿ ಮೇ ಹಾಗೂ ಜೂನ್ ತಿಂಗಳಲ್ಲಿ ಪಡಿತರ ಹಂಚುವುದರಲ್ಲಿ ವಿಳಂಬ ಅನುಸರಿಸುತ್ತಿದ್ದು, ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್‌ದಾರರಿಗೆ ತಲಾ 35 ಕೆಜಿಯಂತೆ 70 ಕೆಜಿ ಹಾಗೂ 25 ಕೆಜಿಯಂತೆ 50 ಕೆಜಿ ಅಕ್ಕಿ ವಿತರಿಸಬೇಕಾದ ನ್ಯಾಯಬೆಲೆ ಅಂಗಡಿ ಮಾಲೀಕರು ಫಲಾನುಭವಿಗಳಿಗೆ ಸರಿಯಾಗಿ ಹಂಚುತ್ತಿಲ್ಲ.
ಗ್ರಾಮದಲ್ಲಿ 150ಕ್ಕೂ ಅಧಿಕ ಕಾರ್ಡ್‌ದಾದರಿದ್ದು, ನ್ಯಾಯಬೆಲೆ ಅಂಗಡಿಗೆ ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಇದರಿಂದ ಜನರಿಗೆ ಸಮಸ್ಯೆಯಾಗಿದೆ. ಕೂಡಲೇ ಅಂಗಡಿ ಮಾಲೀಕರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ಕರವೇ ತಾಲೂಕು ಘಟಕದ ಅಧ್ಯಕ್ಷ ಪ್ರಕಾಶ ಮನ್ನೇರಾಳ್, ಗೌರವಾಧ್ಯಕ್ಷ ಮರಿಯಪ್ಪ, ಉಪಾಧ್ಯಕ್ಷ ಬಾಲಪ್ಪ ಭೋವಿ, ಗ್ರಾಪಂ ಸದಸ್ಯ ಕರೀಂಸಾಬ್ ಕಂಬಾರ್, ಪ್ರಮುಖರಾದ ಮಂಗಲಸಾಬ್, ಶ್ಯಾಮೀದ್‌ಸಾಬ್ ನಿರಲೂಟಿ, ಶಿವಾನಂದ, ಗೋಪಾಲ್ ಚೌವ್ಹಾಣ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net