ಮೃತ ಫಲಾನುಭವಿಗಳ ಹೆಸರು ರದ್ದುಪಡಿಸಿ

ಕೊಪ್ಪಳದಲ್ಲಿ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಮಾತನಾಡಿದರು. ಜಿಪಂ ಉಪ ಕಾರ್ಯದರ್ಶಿ ಟಿ. ಕೃಷ್ಣಮೂರ್ತಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾದ ಉಪಾಧ್ಯಕ್ಷರಾದ ಎಸ್​.ಬಿ.ಖಾದ್ರಿ, ಮಂಜುನಾಥ ಗೊಂಡಬಾಳ, ಅಮರೇಶಪ್ಪ ಎಸ್​.ಗಾಂಜಿ, ನಾಗರಾಜ ಅರಳಿ ಇದ್ದರು.
ಕೊಪ್ಪಳದಲ್ಲಿ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಮಾತನಾಡಿದರು. ಜಿಪಂ ಉಪ ಕಾರ್ಯದರ್ಶಿ ಟಿ. ಕೃಷ್ಣಮೂರ್ತಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾದ ಉಪಾಧ್ಯಕ್ಷರಾದ ಎಸ್​.ಬಿ.ಖಾದ್ರಿ, ಮಂಜುನಾಥ ಗೊಂಡಬಾಳ, ಅಮರೇಶಪ್ಪ ಎಸ್​.ಗಾಂಜಿ, ನಾಗರಾಜ ಅರಳಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರೆಡ್ಡಿ ಶ್ರೀನಿವಾಸ ಸೂಚನೆ
  • ಜಿಲ್ಲಾ ಮಟ್ಟದ ಗ್ಯಾರಂಟಿ ಸಮಿತಿ ಸಭೆ

ಕೊಪ್ಪಳ : ಮೃತ ಪಟ್ಟ ಗೃಹಲಕ್ಷ್ಮೀ ಯೋಜನೆ ಲಾನುಭವಿಗಳ ಹೆಸರನ್ನು ಒಂದು ವಾರದೊಳಗೆ ಪಟ್ಟಿಯಿಂದ ರದ್ದುಪಡಿಸಿ. ಬ್ಯಾಂಕ್​ ಖಾತೆಗೆ ಯೋಜನೆ ಕಂತು ಜಮೆಯಾಗದಂತೆ ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಸೂಚಿಸಿದರು.

ಜಿಪಂ ಜೆ.ಎಚ್​. ಪಟೇಲ್​ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ 7,085 ಗೃಹಲಕ್ಷ್ಮೀ ಫಲಾನುಭವಿಗಳು ಮೃತಪಟ್ಟಿದ್ದು, 2,664 ಫಲಾನುಭವಿಗಳ ಖಾತೆಗಳಿಗೆ ಮರಣದ ಬಳಿಕ 13,709 ಕಂತುಗಳಲ್ಲಿ 2.74 ಕೋಟಿ ರೂ. ಜಮೆಯಾಗಿದೆ. ಈ ಪೈಕಿ 86.67 ಲಕ್ಷ ರೂ. ಸರ್ಕಾರಕ್ಕೆ ಮರುಪಾವತಿಯಾಗಿದ್ದು, 1.87 ಕೋಟಿ ರೂ. ಬಾಕಿಯಿದೆ. ಮೃತರ ಕುಟುಂಬ ಸದಸ್ಯರು ಖಾತೆಯಿಂದ ಡ್ರಾ ಮಾಡಿಕೊಂಡಿರುವ 1.63 ಲಕ್ಷ ರೂ. ಸರ್ಕಾರಕ್ಕೆ ಮರುಪಾವತಿಸುವಂತೆ ಸೂಚಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಿಡಿಪಿಒಗಳು ಫಲಾನುಭವಿಗಳ ಮರಣದ ಮಾಹಿತಿ ತಕ್ಷಣ ಮೇಲಧಿಕಾರಿಗಳಿಗೆ ಸಲ್ಲಿಸಬೇಕು. ಯಾವುದೇ ಫಲಾನುಭವಿ ಸಾಲದ ಬಾಕಿಗೆ ಗೃಹಲಕ್ಷ್ಮೀ ಹಣ ಜಮೆಯಾಗದಂತೆ ಬ್ಯಾಂಕ್​ಗಳು ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಹೇಳಿದರು.
ಶಕ್ತಿ ಯೋಜನೆಯಡಿ 2023ರ ಜೂನ್​ನಿಂದ 2026ರ ಜುಲೈವರೆಗೆ ಕೊಪ್ಪಳ ವಿಭಾಗದಲ್ಲಿ 12.71 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, 476.38 ಕೋಟಿ ರೂ. ವೆಚ್ಚವಾಗಿದೆ. ಶೀಘ್ರದಲ್ಲೇ ಮಹಿಳೆಯರಿಗೆ ಸ್ಮಾರ್ಟ್​ ಐಡಿ ಕಾರ್ಡ್​ ನೀಡಲು ಯೋಜಿಸಲಾಗಿದೆ. ಗೃಹಜ್ಯೋತಿ ಯೋಜನೆಯ 1,99,064 ಫಲಾನುಭವಿಗಳ ಪೈಕಿ 1,23,732 ಜನರ ಸರ್ವೇ ಪೂರ್ಣಗೊಂಡಿದ್ದು, ಬಾಕಿ ಸರ್ವೇ ಶೀಘ್ರ ಪೂರ್ಣಗೊಳಿಸಿ. ಯುವನಿಧಿಯಡಿ 15,551 ಫಲಾನುಭವಿಗಳಿಗೆ 39.18 ಕೋಟಿ ರೂ. ಡಿಬಿಟಿ ಮೂಲಕ ಪಾವತಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಜುಲೈವರೆಗೆ 3,13,459 ಕುಟುಂಬಗಳಿಗೆ 13.42 ಕೋಟಿ ಪಾವತಿಸಲಾಗಿದೆ ಎಂದರು.
ಜಿಪಂ ಉಪ ಕಾರ್ಯದರ್ಶಿ ಟಿ. ಕೃಷ್ಣಮೂರ್ತಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾದ ಉಪಾಧ್ಯಕ್ಷರಾದ ಎಸ್​.ಬಿ.ಖಾದ್ರಿ, ಮಂಜುನಾಥ ಗೊಂಡಬಾಳ, ಅಮರೇಶಪ್ಪ ಎಸ್​.ಗಾಂಜಿ, ನಾಗರಾಜ ಅರಳಿ, ಸದಸ್ಯರಾದ ಶಾರದ ಕಟ್ಟಿಮನಿ, ಹಜರತ್​ ಹುಸೆನ್​, ಆನಂದ ಹಾಸಲಕರ, ದೇವಪ್ಪ ಭಾವಿಕಟ್ಟಿ, ಶಕುಂತಲಾ ಬಿ.ಎಂ., ಸೋಮನಾಥ ದೊಡ್ಡಮನಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net